ದೆಹಲಿಯ ತಾಜ್ ಪ್ಯಾಲೇಸ್ನಲ್ಲಿ ಅಮೇರಿಕ ಮಹಿಳೆಗೆ ಅನಿವಾಸಿ ಭಾರತೀಯನಿಂದ ಕಿರುಕುಳ

ಲ್ಯುಟೈನ್ಸ್ ದೆಹಲಿಯ ಪಂಚತಾರಾ ಹೋಟೆಲಿನ ಹೊರಗೆ 52 ವರ್ಷದ ಅಮೇರಿಕದ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ 22 ವರ್ಷದ ಅನಿವಾಸಿ ಭಾರತೀಯನನ್ನು ಪೊಲೀಸರು ಬಂಧಿಸಿದ್ದಾರೆ.   

Updated: Jan 12, 2018 , 04:54 PM IST
ದೆಹಲಿಯ ತಾಜ್ ಪ್ಯಾಲೇಸ್ನಲ್ಲಿ ಅಮೇರಿಕ ಮಹಿಳೆಗೆ ಅನಿವಾಸಿ ಭಾರತೀಯನಿಂದ ಕಿರುಕುಳ

ನವದೆಹಲಿ : ಲ್ಯುಟೈನ್ಸ್ ದೆಹಲಿಯ ಪಂಚತಾರಾ ಹೋಟೆಲಿನ ಹೊರಗೆ 52 ವರ್ಷದ ಅಮೇರಿಕದ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ 22 ವರ್ಷದ ಅನಿವಾಸಿ ಭಾರತೀಯನನ್ನು ಪೊಲೀಸರು ಬಂಧಿಸಿದ್ದಾರೆ. 

ಆರೋಪಿಯನ್ನು ಅನ್ಮೋಲ್ ಸಿಂಗ್ ಖರ್ಬಂಡಾ ಎಂದು ಗುರುತಿಸಲಾಗಿದ್ದು,  ಗೂಗಲ್ ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಹೆಚ್ಚುವರಿ ಪೊಲೀಸ್ ಆಯುಕ್ತ(ನವದೆಹಲಿ) ಬಿ.ಕೆ.ಸಿಂಗ್ ಅವರ ಪ್ರಕಾರ, "ಜನವರಿ 6 ರಂದು ಮಹಿಳೆ ಹೊಟೇಲ್ಗೆ ತೆರಳಿದ್ದು, ಜ.6ರಂದು ಆತನೊಂದಿಗೆ ಸ್ನೇಹ ಬೆಳೆಸಿದ್ದಾರೆ. ಜನವರಿ 8 ರಂದು ಸುಮಾರು 10 ಗಂಟೆಗೆ ಇಬ್ಬರೂ ತಾಜ್ ಪ್ಯಾಲೇಸ್ ಹೋಟೆಲ್ನ ಬಾರ್ನಲ್ಲಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಆರೋಪಿ ಆಕೆಗೂ ಪಾನೀಯ ನೀಡಿ ಆಕೆಯನ್ನು ತೋಳಿನಿಂದ ಬಳಸಲು ಪ್ರಯತ್ನಿಸಿದ್ದಾನೆ" ಎಂದು ಅವರು ಹೇಳಿದರು.

"ಖರ್ಬಂಡಾ ಆಕೆಯನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ" ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಹೇಳಿದರು. ಘಟನೆಗೆ ಸಂಬಂಧಿಸಿದಂತೆ Google ಗಾಗಿ ಕೆಲಸ ಮಾಡುವ ಖರ್ಬಂಡಾ, ಘಟನೆಯ ಸಮಯದಲ್ಲಿ ಮದ್ಯಪಾನದ ಪ್ರಭಾವದಡಿಯಲ್ಲಿ ಈ ರೀತಿ ವರ್ತಿಸಿದ್ದಾನೆ ಎಂದು ಸಿಂಗ್ ಹೇಳಿದರು.