ದೇಶದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನಾ ಮಲ್ಹೊತ್ರಾ ಇನ್ನಿಲ್ಲ

ಅನ್ನಾ ರಾಜಮ್ ಮಲ್ಹೋತ್ರಾ ಅವರಿಗೆ 1989ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Last Updated : Sep 18, 2018, 06:25 PM IST
ದೇಶದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನಾ ಮಲ್ಹೊತ್ರಾ ಇನ್ನಿಲ್ಲ title=

ಮುಂಬೈ: ಸ್ವತಂತ್ರ ಭಾರತದ ಮೊದಲ ಮಹಿಳಾ ಐಎಎಸ್ ಅಧಿಕಾರಿ ಅನ್ನಾ ರಾಜಮ್ ಮಲ್ಹೋತ್ರಾ ಅವರು ಇಲ್ಲಿನ ಉಪನಗರ ಅಂಧೇರಿಯ ನಿವಾಸದಲ್ಲಿ ಸೋಮವಾರ ನಿಧನರಾಗಿದ್ದಾರೆ. ಮೃತರಿಗೆ 91 ವರ್ಷ ವಯಸ್ಸಾಗಿತ್ತು.

1927ರ ಜುಲೈನಲ್ಲಿ ಕೇರಳದ ಎರ್ನಾಕುಲಂ ಜಿಲ್ಲೆಯ ಅನ್ನಾ ರಾಜಮ್ ಜಾರ್ಜ್ ಆಗಿ ಜನಿಸಿದ ಅವರು, ಕೋಜಿಕೋಡ್'ನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ನಂತರ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಚೆನ್ನೈಗೆ ಸ್ಥಳಾಂತರಗೊಂಡರು. 

ನಂತರ 1951 ರಲ್ಲಿ ಮಲ್ಹೊತ್ರಾ ಮದ್ರಾಸ್ ಕೇಡರ್'ನಲ್ಲಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು. ನಂತರ ಮದ್ರಾಸ್ ರಾಜ್ಯದಲ್ಲಿ ಮುಖ್ಯಮಂತ್ರಿ ಸಿ. ರಾಜಗೋಪಾಲಾಚಾರಿ ಅವರ ಅವಧಿಯಲ್ಲಿ ಸೇವೆ ಸಲ್ಲಿಸಿದರು.

1985 ರಿಂದ 1990 ರವರೆಗೆ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದ ಆರ್.ಎನ್.ಮಲ್ಹೋತ್ರಾ ಅವರನ್ನು ಅನ್ನಾ ಮಲ್ಹೊತ್ರಾ ವಿವಾಹವಾದರು. ಇವರಿಗೆ 1989ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
 

Trending News