ರೈಲು ಪ್ರಯಾಣದಲ್ಲೂ ಸಿಗಲಿದೆ ಐಶಾರಮಿ ಸೌಲಭ್ಯ; ಇದು IRCTC ಯ ಪ್ಲಾನ್

ರೈಲ್ವೆಯಲ್ಲಿ ವಿಶೇಷ ವ್ಯಕ್ತಿಗಳಿಗಾಗಿ ಮಾತ್ರ ಬಳಸಲಾಗುವ ರೈಲ್ವೆ ಸಲೂನ್ ಸೇವೆ ಈಗ ಸಾಮಾನ್ಯ ಜನರಿಗೂ ಒದಗಿಸುವ ಚಿಂತನೆಯಲ್ಲಿ ರೈಲ್ವೇ ಇಲಾಖೆ.

Last Updated : Oct 18, 2018, 04:03 PM IST
ರೈಲು ಪ್ರಯಾಣದಲ್ಲೂ ಸಿಗಲಿದೆ ಐಶಾರಮಿ ಸೌಲಭ್ಯ; ಇದು IRCTC ಯ ಪ್ಲಾನ್ title=

ನವದೆಹಲಿ: ರೈಲ್ವೆಯಲ್ಲಿ ವಿಶೇಷ ವ್ಯಕ್ತಿಗಳಿಗಾಗಿ ಮಾತ್ರ ಬಳಸಲಾಗುವ ರೈಲ್ವೆ ಸಲೂನ್ ಸೇವೆ ಈಗ ಸಾಮಾನ್ಯ ಜನರಿಗೂ ಒದಗಿಸುವ ಬಗ್ಗೆ ರೈಲ್ವೇ ಇಲಾಖೆ ಚಿಂತನೆ ನಡೆಸಿದೆ. ರೈಲ್ವೇ ಅಧಿಕಾರಿಗಳಿಗೆ ಬಳಸುತ್ತಿದ್ದ ಈ ಸಲೂನ್ ಅನ್ನು ಇನ್ನು ಮುಂದೆ ವಾಣಿಜೀಕರಣ ಗೊಳಿಸುವಂತೆ ರೈಲ್ವೆ ಸಚಿವ ಪಿಯೂಶ್ ಗೋಯಲ್  IRCTC ಗೆ ಸೂಚನೆ ನೀಡಿದ್ದಾರೆ. ಅಂದರೆ, ಸಾಮಾನ್ಯ ಜನರಿಗೂ ಈ ಸೇವೆ ಲಭ್ಯವಾಗಲಿದ್ದು, ಅದಕ್ಕಾಗಿ ಶುಲ್ಕ ವಿಧಿಸಲಾಗುತ್ತದೆ.

ವಿಶೇಷ ರೀತಿಯ ಕೋಚ್ ಗಳಲ್ಲಿ ಸಲೂನ್:
IRCTC ಈ ಮೊದಲು ಓಲ್ಡ್ ಡೆಲ್ಲಿ ರೈಲ್ವೆ ನಿಲ್ದಾಣದಲ್ಲಿ ಈ ಸಲೂನ್ ಸೇವೆಯನ್ನು ಪ್ರಾರಂಭಿಸಿತ್ತು. ವಾಸ್ತವವಾಗಿ, ರೈಲ್ವೆ ಅಧಿಕಾರಿಗಳಿಗೆ ಬ್ರಿಟಿಷ್ ಯುಗದಿಂದ ವಿಶೇಷ ರೀತಿಯಾ ಕೋಚ್ ನಲ್ಲಿ ಈ ಸೇವೆ ಲಭ್ಯವಿತ್ತು. ಇದರಲ್ಲಿ ಡ್ರಾಯಿಂಗ್, ಊಟ, ಅಡುಗೆಮನೆ ಮತ್ತು ಎರಡು ಮಲಗುವ ಕೋಣೆಗಳು ಸೇರಿವೆ. ಅಂತಹ ವಿಶೇಷ ವಿಭಾಗಗಳನ್ನು ಸಲೂನ್ ಎಂದು ಕರ್ಯಲಾಗುತ್ತದೆ. ಪ್ರತಿ ಬೆಡ್ ರೂಂನಲ್ಲಿ ಅಟ್ಯಾಚ್ ಬಾತ್ರೂಂ ಇದೆ. ರೈಲಿನಲ್ಲಿ ಅದು ಐಶಾರಾಮಿ ಹೋಟೆಲ್ ನಂತೆ ಭಾಸವಾಗುತ್ತದೆ.

ಸಲೂನ್ ಏಕೆ?
ಮಾರ್ಚ್ ನಲ್ಲಿ  IRCTC ಭಾರತದ ಮೊದಲ ಹವಾನಿಯಂತ್ರಿತ ಸಲೂನ್ ಅನ್ನು ತೆರೆದಿದೆ. ಆರಂಭಿಕ ದಿನಗಳಲ್ಲಿ ಈ ವ್ಯವಸ್ಥೆ ಕೇವಲ ರೈಲ್ವೇ ಅಧಿಕಾರಿಗಳಿಗೆ ಮಾತ್ರ ಇತ್ತು. ಒಂದು ಸಲೂನ್ ನಲ್ಲಿ ಎರಡು ಕುಟುಂಬಗಳು ಒಟ್ಟಿಗೆ ಇರುವ ವ್ಯವಸ್ಥೆ ಇತ್ತು. ರೈಲ್ವೇಸ್ ಇಂತಹ 336 ಸಲೂನ್ ಗಳನ್ನೂ ಹೊಂದಿದೆ. ಅದರಲ್ಲಿ 62 ಹವಾನಿಯಂತ್ರಿತ ವ್ಯವಸ್ಥೆ ಹೊಂದಿವೆ.

ಬ್ರಿಟಿಷ್ ಯುಗದಲ್ಲಿ, ದೇಶದ ದೂರದ ಪ್ರದೇಶಗಳಲ್ಲಿ ರೈಲ್ವೆ ಮಾರ್ಗವನ್ನು ಸ್ಥಾಪಿಸಲಾಗುತ್ತಿತ್ತು ಮತ್ತು ಸೌಕರ್ಯಗಳಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲವಾದ್ದರಿಂದ, ಸಮಸ್ಯೆಯನ್ನು ಪರಿಹರಿಸಲು ರೈಲ್ವೆಯಲ್ಲಿ ಇಂತಹ ಪರಿಹಾರ ವ್ಯವಸ್ಥೆಯನ್ನು ಏರ್ಪಡಿಸಲಾಯಿತು. ಸ್ವಾತಂತ್ರ್ಯದ ನಂತರ ಈ ವ್ಯವಸ್ಥೆಯು ಅದೇ ರೀತಿ ಮುಂದುವರೆದಿದೆ. ದೇಶಾದ್ಯಂತ ಎಲ್ಲಾ ರೈಲ್ವೆ ವಿಭಾಗಗಳು DRM ಮತ್ತು ADRM ಗಾಗಿ ಒಂದು ಸಲೂನ್ ವ್ಯವಸ್ಥೆಯನ್ನು ಹೊಂದಿವೆ. ಪಿಯೂಷ್ ಗೋಯಲ್ ರೈಲ್ವೆ ಮಂತ್ರಿಯಾಗಿ ಬಂದ ನಂತರ, ಸಲೂನ್ ನೀತಿಯನ್ನು ಸುಧಾರಿಸಲಾಯಿತು ಮತ್ತು ಅಗತ್ಯವಿದ್ದರೆ ಮಾತ್ರ ಸಲೂನ್ ಅನ್ನು ಬಳಸಬೇಕೆಂದು ಹೇಳಿದರು. ಅಲ್ಲದೆ, ಸಾಮಾನ್ಯ ಪ್ರವಾಸಿಗರಿಗೆ ರೈಲ್ವೆ ಸಲೂನ್ ನೀಡುವ ನೀತಿಯನ್ನು ಸಹ ಮಾಡಲಾಯಿತು.

Trending News