ಯೂತ್ ಒಲಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ ತಂದ ಜೆರ್ಮಿ ಲಾರಿನ್ನುಂಗಾ

 ಅರ್ಜೆಂಟೀನಾದ ಬ್ಯೂನಸ್ ಐರಿಸ್ನಲ್ಲಿ ನಡೆದ ಮೂರನೇ ಯೂತ್ ಒಲಿಂಪಿಕ್ಸ್ನಲ್ಲಿ ವೆಟ್ಲಿಫ್ಟರ್ ಜೆರೆಮಿ ಲರಿನ್ ಗುಂಗಾ ಅವರು ಮಂಗಳವಾರದಂದು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡರು.

Last Updated : Oct 9, 2018, 12:03 PM IST
ಯೂತ್ ಒಲಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ ತಂದ ಜೆರ್ಮಿ ಲಾರಿನ್ನುಂಗಾ  title=

ನವದೆಹಲಿ: ಅರ್ಜೆಂಟೀನಾದ ಬ್ಯೂನಸ್ ಐರಿಸ್ನಲ್ಲಿ ನಡೆದ ಮೂರನೇ ಯೂತ್ ಒಲಿಂಪಿಕ್ಸ್ನಲ್ಲಿ ವೆಟ್ಲಿಫ್ಟರ್ ಜೆರೆಮಿ ಲರಿನ್ ಗುಂಗಾ ಅವರು ಮಂಗಳವಾರದಂದು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡರು.

ಪುರುಷರ 62 ಕೆಜಿ (ಗ್ರೂಪ್ ಎ) ವಿಭಾಗದಲ್ಲಿ ಒಟ್ಟು 274ಕೆಜಿ ಭಾರವನ್ನು  ಎತ್ತಿದ ಲಾರಿನ್ನುಂಗಾ ತಮ್ಮ ಮೂರನೇ ಯತ್ನದಲ್ಲಿ 150 ಕೆ.ಜಿ.ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.15 ವರ್ಷ ವಯಸ್ಸಿನ ಈ ವೇಟ್ ಲಿಫ್ಟರ್ ಮೊದಲೆರಡು ಯತ್ನದಲ್ಲಿ  120 ಕೆ.ಜಿ ಮತ್ತು 124 ಕೆಜಿ ಭಾರವನ್ನು ಎತ್ತಿದ್ದರು 

ಟರ್ಕಿಯ ಟೊಪ್ಟಾಸ್ ಕ್ಯಾನರ್ (263 ಕೆ.ಜಿ) ಮತ್ತು ಕೊಲಂಬಿಯಾದ ಜೋಸ್ ಮಂಜರರ್ಸ್ (260 ಕೆ.ಜಿ.) ಭಾರವನ್ನು ಎತ್ತುವ ಮೂಲಕ ಕ್ರಮವಾಗಿ ಎರಡು ಮೂರನೇ ಸ್ಥಾನವನ್ನು ಪಡೆದುಕೊಂಡರು 

Trending News