ಕನ್ನಯ್ಯ ಕುಮಾರ್ ವಿರುದ್ಧದ ಜೆಎನ್ಯು ವಿವಿ ನಿರ್ಧಾರ ಕಾನೂನು ಬಾಹಿರ- ದೆಹಲಿ ಹೈಕೋರ್ಟ್

    

Last Updated : Jul 20, 2018, 07:42 PM IST
ಕನ್ನಯ್ಯ ಕುಮಾರ್ ವಿರುದ್ಧದ ಜೆಎನ್ಯು ವಿವಿ ನಿರ್ಧಾರ ಕಾನೂನು ಬಾಹಿರ- ದೆಹಲಿ ಹೈಕೋರ್ಟ್ title=

ನವದೆಹಲಿ: ದೆಹಲಿ ಹೈಕೋರ್ಟ್ ಶುಕ್ರವಾರದಂದು ಜೆಎನ್ಯು ವಿವಿಯು ವಿದ್ಯಾರ್ಥಿ ನಾಯಕ ಕನ್ಯಯ್ಯಾ ಕುಮಾರ್ ಮೇಲೆ ದಂಡ ವಿಧಿಸಿರುವುದನ್ನು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೆ ನ್ಯಾಯಾಲಯ ಈ ವಿಚಾರವಾಗಿ ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳುವವರೆಗೂ ವಿಶ್ವವಿದ್ಯಾನಿಲಯಕ್ಕೆ ಕಾಯಬೇಕೆಂದು ಹೇಳಿದೆ.ದೆಹಲಿ ಹೈಕೋರ್ಟ್ 18 ರಂದು ಜೆಎನ್ಯ್ಯು ಗೆ  ಕನ್ನಯ್ಯ ಕುಮಾರ್ ಮೇಲಿರುವ ದೇಶ ವಿರೋಧಿ ಕೇಸ್ ಮೇಲೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ತಿಳಿಸಿದೆ.

ಜೆಎನ್ಯ್ಯು 2016 ರಲ್ಲಿ  ಕನ್ನಯ್ಯಕುಮಾರ್ ಮೇಲೆ  ದೇಶವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ಮೇಲೆ 10,000 ಸಾವಿರ ದಂಡವನ್ನು ವಿಧಿಸಿತ್ತು.ಆದರೆ ಕನ್ನಯ್ಯ ಕುಮಾರ್ ಇದನ್ನು ಪ್ರಶ್ನಿಸಿ ತರನ್ನುಂ ಚೀಮಾ ಮತ್ತು  ಹರ್ಷ ಬೋರಾ ಮೂಲಕ ಹೈಕೋರ್ಟ್ನಲ್ಲಿ ಇದನ್ನು ಪ್ರಶ್ನಿಸಿದ್ದರು.

ಇನ್ನೊಂದೆಡೆಗೆ ಜೆಎನ್ಯ್ಯು ಉನ್ನತಮಟ್ಟದ ಸಮಿತಿಯು ಉಮರ್ ಖಾಲಿದ್, ಅನಿರ್ಭಾನ್ ಭಟ್ಟಾಚಾರ್ಯ ಅವರನ್ನು ಫೆಬ್ರುವರಿಯಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರಿಂದಾಗಿ ಅವರನ್ನು ಅಪರಾಧಿಗಳನ್ನಾಗಿ ಸಮಿತಿಯು ಪರಿಗಣಿಸಿತ್ತು, ಆದರೆ ಈಗ ದೆಹಲಿ ಹೈಕೋರ್ಟ್ ವಿವಿ ಕ್ರಮವನ್ನು ಕಂಡಿಸಿದ್ದಲ್ಲದೆ ಅದನ್ನು ಕಾನೂನು ಬಾಹಿರ ಎಂದು ಘೋಷಿಸಿದೆ.

Trending News