ಅಹಮದಾಬಾದ್ನಲ್ಲಿ ಮರುಕಳಿಸಿದ ಬುರಾರಿ ಮಾದರಿ ಘಟನೆ: ಆತ್ಮಹತ್ಯೆಗೆ ಶರಣಾದ ಕುಟುಂಬ

ಗುಜರಾತ್ ಪೊಲೀಸ್ ಅಧಿಕಾರಿಯೊಬ್ಬರು ಈ ವಿಷಯದ ಬಗ್ಗೆ ಮಾಹಿತಿ ನೀಡುತ್ತಾ,  ಕುಟುಂಬದ ಸದಸ್ಯರು 24 ಗಂಟೆಗಳಿಂದ ಕರೆಗಳನ್ನು ಸ್ವೀಕರಿಸದ ಕಾರಣ, ಸಂಶಯ ವ್ಯಕ್ತಪಡಿಸಿದ ಕೆಲವರು ಅವರ ಮನೆ ತಲುಪಿದರು ಎಂದು ಹೇಳಿದರು.

Updated: Sep 12, 2018 , 05:51 PM IST
ಅಹಮದಾಬಾದ್ನಲ್ಲಿ ಮರುಕಳಿಸಿದ ಬುರಾರಿ ಮಾದರಿ ಘಟನೆ: ಆತ್ಮಹತ್ಯೆಗೆ ಶರಣಾದ ಕುಟುಂಬ

ಅಹಮದಾಬಾದ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಬುರಾಡಿ ಹತ್ಯಾಕಾಂಡದ ಘಟನೆ ಇನ್ನೂ ಮಾಸಿಲ್ಲ, ಅಷ್ಟರಲ್ಲಿ ಅಂತಹದ್ದೇ ಮತ್ತೊಂದು ಘಟನೆ ಗುಜರಾತ್ನ ಅಹ್ಮದಾಬಾದ್ ನಗರದಲ್ಲಿ ನಡೆದಿದೆ. ಬುಧವಾರ (ಸೆಪ್ಟೆಂಬರ್ 12) ಅಹಮದಾಬಾದ್ನಲ್ಲಿ, ಒಂದೇ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಣಾಲ್ ತ್ರಿವೇದಿ ಅವರು ಕಾಸ್ಮೆಟಿಕ್ಸ್ ಬಿಸಿನೆಸ್ ನಡೆಸುತ್ತಿದ್ದು, ಕಳೆದ ಒಂದು ವರ್ಷದಿಂದ ನರೋಡಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

ಈ ವಿಷಯದ ಬಗ್ಗೆ ಮಾಹಿತಿ ನೀಡುತ್ತಾ ಗುಜರಾತ್ ಪೊಲೀಸ್ ಅಧಿಕಾರಿಯೊಬ್ಬರು, ಕೃಷ್ಣಲ್ ತ್ರಿವೇದಿ ಕುಟುಂಬದ ಸದಸ್ಯರು 24 ಗಂಟೆಗಳಿಂದ ಕರೆಗಳನ್ನು ಸ್ವೀಕರಿಸದ ಕಾರಣ, ಸಂಶಯ ವ್ಯಕ್ತಪಡಿಸಿದ ಕೆಲವರು ಅವರ ಮನೆ ತಲುಪಿದರು ಎಂದು ಹೇಳಿದರು. ಅವರು ಕೋಣೆಗೆ ಪ್ರವೇಶಿಸಿದ ತಕ್ಷಣ ಎಲ್ಲರಿಗೂ ಆಘಾತ ಕಾದಿತ್ತು. ಕೃಣಾಲ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದರೆ, ಆತನ ಹೆಂಡತಿ ನೆಲದ ಮೇಲೆ ಬಿದ್ದಿದ್ದರು ಮತ್ತು ಮಗಳು ಹಾಸಿಗೆಯ ಮೇಲೆ ಮೃತಪಟ್ಟಿದ್ದರು. ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಕೃಣಾಲ್ ತಮ್ಮ ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿದ ನಂತರ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದ್ದು ತನಿಖೆ ನಂತರವಷ್ಟೇ ನಿಜಾಂಶ ಹೊರಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಪೊಲೀಸರು ಮೂರು ಶವಗಳನ್ನು ಮರಣೋತ್ತರಕ್ಕೆ ಕಳುಹಿಸಿದ್ದಾರೆ. ಬ್ಲಾಕ್ ಮ್ಯಾಜಿಕ್ ಮತ್ತು ಮಂತ್ರ-ತಂತ್ರದ ಕಾರಣದಿಂದ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಊಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. 

By continuing to use the site, you agree to the use of cookies. You can find out more by clicking this link

Close