ಮೋದಿಜಿ ನೀವು ನನ್ನನ್ನು ಸುಮ್ಮನಿರಿಸಲು ಸಾಧ್ಯವಿಲ್ಲ- ಯೋಗೇಂದ್ರ ಯಾದವ್

    

Last Updated : Jul 12, 2018, 01:16 PM IST
ಮೋದಿಜಿ ನೀವು ನನ್ನನ್ನು ಸುಮ್ಮನಿರಿಸಲು ಸಾಧ್ಯವಿಲ್ಲ- ಯೋಗೇಂದ್ರ ಯಾದವ್ title=
Photo courtesy: Swaraj India

ನವದೆಹಲಿ: ಇತ್ತೀಚಿಗೆ ಹರ್ಯಾಣದ ರೇವಾಡಿ ಜಿಲ್ಲೆಯಲ್ಲಿ ರೈತರರು ಮತ್ತು ಕೃಷಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ 9 ದಿನಗಳ ಕಾಲ ಸುಮಾರು 200 ಕಿಮೀ ದೂರದ ಪಾದಯಾತ್ರೆ ಕೈಗೊಂಡಿದ್ದ ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ಕುಟುಂಬದ ಮೇಲೆ ಐಟಿ ದಾಳಿ ಮಾಡಲಾಗಿದೆ.  

ಈ ಕುರಿತು ಟ್ವೀಟ್ ಮಾಡಿರುವ ಯೋಗೇಂದ್ರ ಯಾದವ್ " ಮೋದಿ ಸರ್ಕಾರ ಕನಿಷ್ಠ ಬೆಂಬಲ ಬೆಲೆ(MSP) ಸಾರಾಯಿ ಅಂಗಡಿಗಳ  ಮಾರಾಟದ ವಿಚಾರವಾಗಿ ರೇವಾಡಿಯಲ್ಲಿ  9 ದಿನಗಳ ಪಾದಯಾತ್ರೆ  ಮುಗಿದ ಎರಡು ದಿನಗಳ ನಂತರ ರೇವಾಡಿಯಲ್ಲಿರುವ ನನ್ನ ಸಹೋದರಿಯ ಆಸ್ಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಮೇಲೆ ಐಟಿ ದಾಳಿಯನ್ನು ಮಾಡಲಾಗಿದೆ. ದಯವಿಟ್ಟು ನನ್ನನ್ನು ಮತ್ತು ನನ್ನ ಮನೆಯನ್ನು ಹುಡುಕಿ, ಯಾಕೆ ನನ್ನ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ ಯಾದವ್ ಅವರು ಪ್ರತಿಕ್ರಿಯಿಸುತ್ತಾ ಸುಮಾರು 100 ಅಧಿಕ ದೆಹಲಿ ಸಿಬ್ಬಂಧಿ ಇಂದು ಬೆಳಗ್ಗೆ ನನ್ನ ಸಹೋದರಿಯರನ್ನು(ವೈದ್ಯರು) ತಡೆಹಿಡಿಯಲಾಗಿದೆ ಅಲ್ಲದೆ ಐಸಿಯುನಲ್ಲಿರುವ  ಮಕ್ಕಳನ್ನು ಸೇರಿ ಆಸ್ಪತ್ರೆಯನ್ನು ವಶಪಡಿಸಲಾಗಿದೆ.ಇದು ಸ್ಪಷ್ಟವಾಗಿ ಹೆದರಿಸುವ ಪ್ರಯತ್ನ, ಮೋದಿಜಿ ನೀವು ನನ್ನನ್ನು ಸುಮ್ಮನಿರಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
 

Trending News