ಮೇ.6 ರಂದು ನೀಟ್ ಪರೀಕ್ಷೆ; ಆಧಾರ್ ಕಡ್ಡಾಯಗೊಳಿಸಿದ ಸಿಬಿಎಸ್ಇ

ವೈದ್ಯಕೀಯ ಮತ್ತು ದಂತ ಶಿಕ್ಷಣ ಪದವಿ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ(NEET) ದಿನಾಂಕವನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಘೋಷಿಸಿದೆ. 

Last Updated : Feb 9, 2018, 12:18 PM IST
ಮೇ.6 ರಂದು ನೀಟ್ ಪರೀಕ್ಷೆ; ಆಧಾರ್ ಕಡ್ಡಾಯಗೊಳಿಸಿದ ಸಿಬಿಎಸ್ಇ title=

ನವದೆಹಲಿ : ವೈದ್ಯಕೀಯ ಮತ್ತು ದಂತ ಶಿಕ್ಷಣ ಪದವಿ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ(NEET) ದಿನಾಂಕವನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಘೋಷಿಸಿದೆ. 

ಮೇ 6, 2018 ರಂದು ದೇಶಾದ್ಯಂತ ಪರೀಕ್ಷೆ ನಡೆಯಲಿದ್ದು ಇಂದಿನಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ  ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಮಾರ್ಚ್ 9 ಕಡೆಯ ದಿನಾಂಕವಾಗಿದೆ. 

ಪರೀಕ್ಷೆಯ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಲು ಮಾರ್ಚ್ 10 ಕಡೆಯ ದಿನಾಂಕವಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1400 ರೂ. ಮತ್ತು ಪರಿಶಿಷ್ಟ ಜಾತಿ/ಪಂಗಡ/ವಿಶೇಷಚೇತನ ಅಭ್ಯರ್ಥಿಗಳಿಗೆ 750 ರೂ. ನಿಗದಿ ಪಡಿಸಲಾಗಿದೆ. ಆಸಕ್ತರು ಬೋರ್ಡ್ ವೆಬ್ ಸೈಟ್ cbseneet.nic.in ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು.

ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಮೇಘಾಲಯದ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರ ಎಲ್ಲಾ ಅಭ್ಯರ್ಥಿಗಳಿಗೆ ಸಿಬಿಎಸ್ಇ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿದೆ. 

ಹೆಚ್ಚಿನ ಮಾಹಿತಿಗೆ ಬೋರ್ಡ್ ವೆಬ್ ಸೈಟ್ cbseneet.nic.inಗೆ ಭೇಟಿ ನೀಡಬಹುದು.

Trending News