ಹಾಂಕಾಂಗ್'ನಿಂದ ನೀರವ್ ಮೋದಿ ಪರಾರಿ; ಹೋಗಿದ್ದಾದರೂ ಎಲ್ಲಿಗೆ?

ಇಂಗ್ಲಿಷ್ ಸುದ್ದಿ ವಾಹಿನಿಯೊಂದರ ಮಾಹಿತಿ ಪ್ರಕಾರ, ನೀರವ್ ಮೋದಿ ಹಾಂಕಾಂಗ್'ನಿಂದ ಪರಾರಿಯಾಗಿದ್ದಾನೆ. 

Last Updated : Apr 26, 2018, 05:16 PM IST
ಹಾಂಕಾಂಗ್'ನಿಂದ ನೀರವ್ ಮೋದಿ ಪರಾರಿ; ಹೋಗಿದ್ದಾದರೂ ಎಲ್ಲಿಗೆ? title=

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ ಎಲ್ಲಿದ್ದಾನೆ ಎಂಬುದರ ಬಗ್ಗೆ ಇದುವರೆಗೂ ಯಾವುದೇ ನಿರ್ದಿಷ್ಟ ಮಾಹಿತಿ ದೊರೆತಿರಲಿಲ್ಲ. ಆದರೆ ಇದೀಗ ಆ ಮಾಹಿತಿ ಬಹಿರಂಗವಾಗಿದೆ. ಇಂಗ್ಲಿಷ್ ಸುದ್ದಿ ವಾಹಿನಿಯೊಂದರ ಮಾಹಿತಿ ಪ್ರಕಾರ, ನೀರವ್ ಮೋದಿ ಹಾಂಕಾಂಗ್'ನಿಂದ ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲ, ಅಲ್ಲಿಂದ ಲಂಡನ್'ಗೆ ಹೋಗಿ, ಈಗ ಅಲ್ಲಿಂದಲೂ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ನೀರಾವ್ ಮೋದಿ ಹಾಂಕಾಂಗ್ ನಲ್ಲಿರುವ ಬಗ್ಗೆ ಮಾಹಿತಿ ಪಡೆದಿದ್ದ ಸರ್ಕಾರ ಆತನನ್ನು ಬಂಧಿಸಲು ಸಾಕಷ್ಟು ಕಾರ್ಯತಂತ್ರ ರೂಪಿಸಿತ್ತು. ಆದರೀಗ ನೀರವ್ ಮೋದಿ ಅಲ್ಲಿಂದಲೂ ತಪ್ಪಿಸಿಕೊಂಡಿದ್ದಾನೆ. 

ಹಾಂಕಾಂಗ್'ನಿಂದ ಪರಾರಿಯಾದ ನಿರಾವ್ ಮೋದಿ
ಇಂಗ್ಲೀಷ್ ಸುದ್ದಿ ವಾಹಿನಿಯೊಂದರ ಪ್ರಕಾರ, ಜನವರಿ 1 ರಂದು ನೀರವ್ ಮೋದಿ ಮುಂಬೈನಿಂದ ಯುಎಇಗೆ ಹೋಗಿದ್ದ. ನಂತರ ಅಲ್ಲಿಂದ ನ್ಯೂಯಾರ್ಕ್'ಗೆ ಹೋಗಿ ಹಾಂಕಾಂಗ್'ಗೆ ತಲುಪಿದ ಎನ್ನಲಾಗಿದೆ. ಅಲ್ಲದೆ, ಭಾರತೀಯ ತನಿಖಾ ಸಂಸ್ಥೆ ಪ್ರಕಾರ ನೀರಾವ್ ಮೋದಿ ಫೆಬ್ರವರಿ 14 ರಂದು ಹಾಂಗ್ ಕಾಂಗ್ ನಿಂದ ಪರಾರಿಯಾಗಿರುವುದಾಗಿ ಹೇಳಿದೆ. ಮೂಲಗಳ ಪ್ರಕಾರ, ಕಠಿಣವಾದ ಕಾನೂನು ಪ್ರಕ್ರಿಯೆ ಕಾರಣ ನೀರವ್ ಮೋದಿ ಹಾಂಕಾಂಗ್'ನಲ್ಲಿ ಹೆಚ್ಚು ದಿನ ಇರಲಾಗದೆ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ.

ಹಾಂಕಾಂಗ್'ನಿಂದ ನಿರಾವ್ ಮೋದಿ ಹೋಗಿದ್ದಾದರೂ ಎಲ್ಲಿಗೆ?
ಇಂಗ್ಲಿಷ್ ಚಾನಲ್ ವರದಿ ಪ್ರಕಾರ, ಫೆಬ್ರವರಿ 15, 2018ರಂದು ಲಂಡನ್'ಗೆ ಹೋದ ಮೋದಿ ಅಲ್ಲಿ ಸುಮಾರು ಒಂದು ತಿಂಗಳ ಕಾಲ ಇದ್ದ ಎನ್ನಲಾಗಿದೆ. ನಂತರ ಮಾರ್ಚ್ ಮೂರನೇ ವಾರದಲ್ಲಿ ನ್ಯೂಯಾರ್ಕ್ಗೆ ತೆರಳಿದ್ದಾನೆ. ಅಲ್ಲಿನ ಕೆಲ ಉದ್ಯಮಿಗಳು ಮತ್ತು ಇತರರು ಆತ ನ್ಯೂಯಾರ್ಕ್ನಲ್ಲಿನ ರಿಜೆನ್ಸಿ ಹೋಟೆಲ್ ಬಳಿ ನೋಡಿದ್ದಾರೆ. 

ಹಾಂಗ್ ಕಾಂಗ್'ನಿಂದ ಭಾರತಕ್ಕೆ ಕರೆತರಲು ಸಿದ್ಧತೆ ನಡೆಸಲಾಗಿತ್ತು
ಬ್ಯಾಂಕ್ ವಂಚನೆ ಆರೋಪ ಎದುರಿಸುತ್ತಿರುವ ನೀರವ್ ಮೋದಿಯನ್ನು ಹಾಂಕಾಂಗ್'ನಿಂದ ಭಾರತಕ್ಕೆ ಕರೆತರಲು ಸರ್ಕಾರ ಪ್ಲಾನ್ ಮಾಡಿತ್ತು. ಅದಕ್ಕಾಗಿ ಹಾಂಕಾಂಗ್'ನ ನ್ಯಾಯಾಂಗ ಇಲಾಖೆಯಲ್ಲಿ ನೀರವ್ ಮೋದಿಯನ್ನು ಬಂಧಿಸಲು ಅನುಮತಿ ಕೋರಿ ಅರ್ಜಿಯನ್ನೂ ಸಲ್ಲಿಸಿತ್ತು.  ಇದರಲ್ಲಿ ಸಿಬಿಐ ಮತ್ತು ಇಡಿ ನೀರವ್ ಮೋದಿ ವಿರುದ್ಧ ಹೂಡಿರುವ ಎಲ್ಲಾ ಮೊಕದ್ದಮೆಗಳ ವಿವರಗಳನ್ನೂ ಸಲ್ಲಿಸಲಾಗಿತ್ತು. ಅಲ್ಲದೆ, ಜಾಮೀನುರಹಿತ ವಾರಂಟ್'ಗೆ ಅರ್ಜಿ ಸಲ್ಲಿಸಲಾಗಿತ್ತು.

Trending News