ವ್ಯಾಲೆಂಟೈನ್ಸ್ ಡೇ ಬದಲಾಗಿ ಮಹಾಶಿವರಾತ್ರಿ ಆಚರಿಸಿ- ಲಕ್ನೋ ವಿಶ್ವವಿದ್ಯಾಲಯ

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವನ್ನು ಬಿಟ್ಟು, ದೇಶೀಯ ಆಚರಣೆಯಾದ ಮಹಾಶಿವರಾತ್ರಿಯನ್ನು ಆಚರಿಸಲು ವಿಶ್ವವಿದ್ಯಾನಿಲಯ ಹೇಳಿದೆ. 

Updated: Feb 13, 2018 , 11:43 AM IST
ವ್ಯಾಲೆಂಟೈನ್ಸ್ ಡೇ ಬದಲಾಗಿ ಮಹಾಶಿವರಾತ್ರಿ ಆಚರಿಸಿ- ಲಕ್ನೋ ವಿಶ್ವವಿದ್ಯಾಲಯ

ಲಕ್ನೊ: ಫೆಬ್ರವರಿ 14 ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸದಂತೆ  ಲಕ್ನೋ ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದ್ದು, ಇದನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದೆ. 

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವನ್ನು ಬಿಟ್ಟು, ದೇಶೀಯ ಆಚರಣೆಯಾದ ಮಹಾಶಿವರಾತ್ರಿಯನ್ನು ಆಚರಿಸಲು ವಿಶ್ವವಿದ್ಯಾನಿಲಯ ಹೇಳಿದೆ. 

ಕಳೆದ ಕೆಲವು ವರ್ಷಗಳಂತೆ ಈ ವರ್ಷವೂ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಡಿಯಲ್ಲಿ, ಯುವಕರು 14.2.2018 ರ ವ್ಯಾಲೆಂಟೈನ್ಸ್ ಡೇ ಆಚರಿಸುತ್ತಿದ್ದಾರೆಂದು ತಿಳಿದುಬಂದ ಹಿನ್ನೆಲೆಯಲ್ಲಿ 14.2.2018 ರಂದು  ಮಹಾ ಶಿವರಾತ್ರಿ ಸಂದರ್ಭದಲ್ಲಿ ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಇಡೀ ಮೊದಲ ಬಾರಿಗೆ ವಿಶ್ವವಿದ್ಯಾನಿಲಯವು ಪ್ರೇಮಿಗಳ ದಿನದಂದು ಅಂತಹ ಸೂಚನೆ ನೀಡಿದ್ದು, ಪೋಷಕರಿಗೂ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸದಂತೆ ತಿಳಿಸಿದೆ.