ಇನ್ನು ಮುಂದೆ ದುಬಾರಿಯಾಗಲಿದೆ ತಾಜ್ ಮಹಲ್ ವೀಕ್ಷಣೆ

   

Updated: Jan 13, 2018 , 01:41 PM IST
ಇನ್ನು ಮುಂದೆ ದುಬಾರಿಯಾಗಲಿದೆ ತಾಜ್ ಮಹಲ್ ವೀಕ್ಷಣೆ

ಆಗ್ರಾ: ಜಗತ್ಪ್ರಸಿದ್ಧ ತಾಜ್ ಮಹಲ್ ವೀಕ್ಷಣೆ ಮಾಡಬಯಸುವವರು ಇನ್ನು ಮುಂದೆ 10 ರೂಪಾಯಿ ಹೆಚ್ಚಿಗೆ ನೀಡಬೇಕಾಗುತ್ತದೆ.

ಕಾರಣವಿಷ್ಟೇ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಪ್ರಸ್ತುತವಿರುವ 40 ರೂಪಾಯಿಗಳ ಬದಲಾಗಿ ಅದನ್ನು 50 ರೂಪಾಯಿಗೆ ಏರಿಸಲಾಗುತ್ತಿದೆ, ಆ ಮೂಲಕ 40 ರೂಪಾಯಿ ಎಎಸ್ಐ ಹಾಗೂ 10 ರೂಪಾಯಿ ಆಗ್ರಾ ಅಭಿವೃದ್ದಿ ಪ್ರಾಧಿಕಾರಕ್ಕೆ ಇದರ ಪಾಲು ಲಭ್ಯವಾಗಲಿದೆ ಎಂದು ವರದಿಯಾಗಿದೆ. ಆದರೆ ಶುಲ್ಕ ಹೆಚ್ಚಳಕ್ಕೆ ಪ್ರವಾಸೋದ್ಯಮ ವಲಯದಿಂದ ತೀವ್ರ ವಿರೋಧ ಉಂಟಾಗಿದೆ. ಕಳೆದ ಎರಡು ವರ್ಷಗಳಲ್ಲಿ ಎರಡನೇ ಬಾರಿಗೆ ಪ್ರವೇಶ ಶುಲ್ಕದಲ್ಲಿ ಏರಿಕೆ ಕಂಡಿದೆ.

ಈಗ ಶುಲ್ಕ ಹೆಚ್ಚಳದಿಂದ ಪ್ರವೇಶ ಶುಲ್ಕವು ದೇಶಿಯ ಪ್ರವಾಸಿಗರಿಗೆ 40 ರೂಪಾಯಿಗಳಿಂದ 50 ರೂಪಾಯಿಗೆ ಏರಿಕೆಯಾದರೆ  ವಿದೇಶಿ ಪ್ರವಾಸಿಗರಿಗೆ 1000 ರೂಪಾಯಿಗಳಿಂದ 1100 ವರೆಗೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.