ಆಪರೇಶನ್ ಬರ್ತ್ ಡೇ : ಒಂದೇ ದಾಳಿಗೆ 67 ದರೋಡೆಕೋರರನ್ನು ಬಂಧಿಸಿದ ಚೆನ್ನೈ ಪೊಲೀಸರು

ಹುಟ್ಟುಹಬ್ಬ ಆಚರಣೆ ನಡೆಯುತ್ತಿದ್ದ ಸ್ಥಳವನ್ನು ಆಕ್ರಮಿಸಿದ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಹುಡುಕುತ್ತಿದ್ದ 67ಕ್ಕೂ ಹೆಚ್ಚು ದರೋಡೆಕೊರರನ್ನು ಒಂದೇ ಕಡೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Updated: Feb 8, 2018 , 07:30 PM IST
ಆಪರೇಶನ್ ಬರ್ತ್ ಡೇ : ಒಂದೇ ದಾಳಿಗೆ 67 ದರೋಡೆಕೋರರನ್ನು ಬಂಧಿಸಿದ ಚೆನ್ನೈ ಪೊಲೀಸರು

ಚೆನ್ನೈ : ಅನಿರೀಕ್ಷಿತ ಬೆಳವಣಿಗೆಯಲ್ಲಿ ಗ್ಯಾಂಗ್ ಸ್ಟರ್ ಒಬ್ಬನ ಹುಟ್ಟುಹಬ್ಬ ಆಚರಣೆ ನಡೆಯುತ್ತಿದ್ದ ಸ್ಥಳವನ್ನು ಆಕ್ರಮಿಸಿದ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಹುಡುಕುತ್ತಿದ್ದ 67ಕ್ಕೂ ಹೆಚ್ಚು ದರೋಡೆಕೊರರನ್ನು ಒಂದೇ ಕಡೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಚೆನ್ನೈ ಹೊರವಲಯದ ಮಲಯಾಂಬಕ್ಕಂ ಗ್ರಾಮದ ಬಳಿ ತಮ್ಮ ಕಟ್ಟಾ ನಾಯಕ ಚೋಲೈಮೇಡು ಬಿನ್ನು ಹುಟ್ಟುಹಬ್ಬವನ್ನು ಆಚರಿಸಲು ದರೋಡೆಕೋರರು ಒಂದೆಡೆ ಸೇರಿದ್ದರು ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಆ ಸ್ಥಳವನ್ನು ಸುತ್ತುವರಿದು, 'ಆಪರೇಶನ್ ಬರ್ತ್' ಹೆಸರಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದರು. ಕುಡಿದ ಮತ್ತಿನಲ್ಲಿದ್ದ ದರೋಡೆಕೋರರಿಗೆ ಅಲ್ಲಿ ಏನಾಗುತ್ತಿದೆ ಎಂಬುದರ ಅರಿವಾಗದೆ ತಬ್ಬಿಬ್ಬಾಗಿದ್ದರು ಎನ್ನಲಾಗಿದೆ. 

ಈ ಸಂದರ್ಭದಲ್ಲಿ ಬಿನ್ನು ಸೇರಿದಂತೆ ಕೆಲವರು ಮೋಟಾರು ಬೈಕುಗಳಲ್ಲಿ ತಪ್ಪಿಸಿಕೊಳ್ಳುವಲ್ಲಿ  ಸಮರ್ಥರಾದರೂ, ಉಳಿದವರನ್ನು ಪೊಲೀಸರು ಬಂಧಿಸಿದರು. 60 ಮೋಟರ್ ಬೈಕುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಆರು ಐಷಾರಾಮಿ ಕಾರುಗಳನ್ನು ಸ್ಥಳದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.