ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ ಪಾಕ್: ದಾಳಿಯಲ್ಲಿ ಬಿಎಸ್ಎಫ್ ಸೈನಿಕನೊಬ್ಬನ ಹತ್ಯೆ

    

Updated: Jan 3, 2018 , 07:01 PM IST
ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ ಪಾಕ್: ದಾಳಿಯಲ್ಲಿ ಬಿಎಸ್ಎಫ್ ಸೈನಿಕನೊಬ್ಬನ ಹತ್ಯೆ
Photo Courtesy: ANI(ಸಾಂದರ್ಭಿಕ ಚಿತ್ರ)

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯ ಪ್ರದೇಶದಲ್ಲಿ  ಪಾಕಿಸ್ತಾನ ಸೇನೆಯು ಅಂತರರಾಷ್ಟ್ರೀಯ ಗಡಿಪ್ರದೇಶದಲ್ಲಿ ಗುಂಡಿನ ದಾಳಿ ಮಾಡುವುದರ ಮೂಲಕ ಮತ್ತೊಮ್ಮೆ ಗಡಿ ನಿಯಮ ಉಲ್ಲಂಘಿಸಿದೆ. ಈ ಸಂದರ್ಭದಲ್ಲಿ ಬಿಎಸ್ಎಫ್  ಸೈನಿಕನೊಬ್ಬ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಡಿಸೆಂಬರ್ 31 ರಂದು ಪಾಕಿಸ್ತಾನ ಸೇನೆಯು ಕಾಶ್ಮೀರದ  ಪೂಂಚ್ ಜಿಲ್ಲೆಯ ಮತ್ತು ನೌಶೇರಾ ವಲಯದ ಡಿಗ್ವಾರ್ ವಲಯದಲ್ಲಿ  ಕದನ ವಿರಾಮ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದೆ.

ಡಿಸೆಂಬರ್ ಪೂರ್ತಿ ಪಾಕಿಸ್ತಾನ LoC ನಲ್ಲಿ ನಿರಂತರವಾಗಿ ಗಡಿ ಉಲ್ಲಂಘನೆ ಮಾಡುತ್ತಿದ್ದು. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭದ್ರತಾ ಪಡೆಗಳ ಕಾರ್ಯಾಚರಣೆ ಹಾಗೂ ಸೈನ್ಯದ ಸಿದ್ಧತೆಯನ್ನು ಕಳೆದ ವಾರ ಪರಿಶೀಲಿಸಿದ್ದರು .

ಡಿಸೆಂಬರ್ 23 ರಂದು ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಪಾಕಿಸ್ತಾನ ಸೇನೆಯು LoC ಮೇಲೆ ಕದನ ವಿರಾಮ ಉಲ್ಲಂಘನೆಯಲ್ಲಿ ನಾಲ್ಕು ಭಾರತೀಯ ಸೇನಾ ಸೈನಿಕರು ಮೃತಪಟ್ಟಿದ್ದರು. ಭಾರತೀಯ ಸೇನಾಪಡೆಗಳು ಇದಕ್ಕೆ ಪ್ರತಿಯಾಗಿ ಮೂರು ಪಾಕಿಸ್ತಾನಿ ಯೋಧರನ್ನು ಹತ್ಯೆಗೈದಿದ್ದರು.

By continuing to use the site, you agree to the use of cookies. You can find out more by clicking this link

Close