ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷವು ಕರ್ನಾಟಕವನ್ನು ಆಳಬೇಕು-ಅಸಾದುದ್ದೀನ್ ಓವೈಸಿ

   

Updated: Apr 16, 2018 , 02:37 PM IST
ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷವು ಕರ್ನಾಟಕವನ್ನು ಆಳಬೇಕು-ಅಸಾದುದ್ದೀನ್ ಓವೈಸಿ

ಹೈದರಾಬಾದ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಐಐಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ. ಆದರೆ ಕರ್ನಾಟಕದ ಚುನಾವಣೆಯಲ್ಲಿ ಅದು ಜೆಡಿಎಸ್ ಬೆಂಬಲ ನೀಡಲಿದೆ ಎಂದು ಹೇಳಲಾಗಿದೆ.

ಎಎನ್ ಐ ಸುದ್ದಿ ಸಂಸ್ಥೆಗೆ ಮಾತನಾಡಿದ ಅಸಾದುದ್ದೀನ್ ಓವೈಸಿ ಕರ್ನಾಟಕದಲ್ಲಿ ಎಐಐಐಎಂ ಪಕ್ಷವು ಜೆಡಿಎಸ್ ಬೆಂಬಲಿಸುತ್ತದೆ ಮತ್ತು ಅದರ ಪರವಾಗಿ ಪ್ರಚಾರದಲ್ಲಿಯೂ ಕೂಡ ಭಾಗವಹಿಸಲಿದೆ ಎಂದು ತಿಳಿಸಿದ್ದಾರೆ.

"ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ನಾವು ಸ್ಪರ್ಧಿಸುವುದಿಲ್ಲ, ಎಐಐಎಂಎಂ ಪಕ್ಷವು  ಜೆಡಿಎಸ್ ಅನ್ನು ಬೆಂಬಲಿಸುತ್ತದೆ ಮತ್ತು ಅದಕ್ಕಾಗಿ ಪ್ರಚಾರದಲ್ಲಿಯೂ ಭಾಗವಹಿಸುತ್ತದೆ. ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷವು ಕರ್ನಾಟಕವನ್ನು ಆಳಬೇಕು" ಎಂದು ಒವೈಸಿ ತಿಳಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ ಆದ್ದರಿಂದ ಇದು ರಾಜ್ಯದಲ್ಲಿ ಬದಲಾವಣೆಗೆ ಸೂಕ್ತ ಸಮಯವೆಂದರು.

By continuing to use the site, you agree to the use of cookies. You can find out more by clicking this link

Close