ನಿಮಗೆ ಗೊತ್ತಾ? ಈ ಸಂಸದೆಗೆ ಪ್ರಧಾನಿ ಮೋದಿ ತೆಲುಗಿನಲ್ಲಿ ಶುಭ ಕೋರಿದ್ದಾರೆ!

    

webmaster A | Updated: Mar 13, 2018 , 06:35 PM IST
ನಿಮಗೆ ಗೊತ್ತಾ? ಈ ಸಂಸದೆಗೆ ಪ್ರಧಾನಿ ಮೋದಿ ತೆಲುಗಿನಲ್ಲಿ ಶುಭ ಕೋರಿದ್ದಾರೆ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ ಮಹಿಳಾ ಸಂಸದೆಗೆ ತೆಲುಗಿನಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗಾದ್ರೆ ಯಾರಂತಿರಾ ಆ ಮಹಿಳಾ ಸಂಸದೆ?

ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ಎಸ್) ಪಕ್ಷ ಸಂಸದೆಯಾದ ಕಲ್ವಕುಂಟ್ಲಾ ಕವಿತಾರವರ ಹುಟ್ಟು ಹಬ್ಬಕ್ಕೆ ಶುಭಕೋರಿರುವ ಪ್ರಧಾನಿ ಮೋದಿ "ಈ ದೇಶದ ಜನರ ಸೇವೆಗಾಗಿ ದೇವರು ಇನ್ನಷ್ಟು ಆರೋಗ್ಯ ಮತ್ತು ಸಂತೋಷವನ್ನು ನೀಡಲಿ" ಎಂದು ತೆಲುಗಿನಲ್ಲಿ ಬರೆದ ಪತ್ರದ ಮೂಲಕ ಶುಭಕೋರಿದ್ದಾರೆ.

ಸಂಸದೆ ಕವಿತಾರವರು ತೆಲಂಗಾಣ ಮುಖ್ಯಮಂತ್ರಿಯಾಗಿರುವ ಕೆ ಚಂದ್ರಶೇಖರ್ ರಾವ್ ರವರ ಮಗಳು ಮತ್ತು ತೆಲಂಗಾಣ ರಾಜ್ಯದ ಮೊದಲ ಮಹಿಳಾ ಸಂಸದೆ ಎನ್ನುವ ಶ್ರೇಯ ಇವರದ್ದಾಗಿದೆ.