ಸ್ವಂತ ಕಾರಿಲ್ಲದ ಪ್ರಧಾನಿ ನರೇಂದ್ರ ಮೋದಿ ಬಳಿ ಇರುವ ಆಸ್ತಿ ಎಷ್ಟು ಗೊತ್ತೇ?

ಪ್ರಧಾನಿ ಕಚೇರಿ (ಪಿಎಂಒ) ಬಿಡುಗಡೆ ಮಾಡಿದ ಮೋದಿಯವರ ಇತ್ತೀಚಿನ ಆಸ್ತಿ ಘೋಷಣೆಯ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ 50,000 ಕ್ಕಿಂತ ಕಡಿಮೆ ಹಣವನ್ನು ಹೊಂದಿದ್ದಾರೆ.

Last Updated : Sep 19, 2018, 12:55 PM IST
ಸ್ವಂತ ಕಾರಿಲ್ಲದ ಪ್ರಧಾನಿ ನರೇಂದ್ರ ಮೋದಿ ಬಳಿ ಇರುವ ಆಸ್ತಿ ಎಷ್ಟು ಗೊತ್ತೇ? title=

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೋಟ್ಯಾಧಿಪತಿ. ಆದರೆ ಅವರ ಬಳಿ ಸ್ವಂತ ಕಾರ್ ಆಗಲಿ ಅಥವಾ ದ್ವಿಚಕ್ರ ವಾಹನವಾಗಲಿ ಇಲ್ಲ. ಪ್ರಧಾನಿ ಕಚೇರಿ (ಪಿಎಂಒ) ಬಿಡುಗಡೆ ಮಾಡಿದ ಮೋದಿಯವರ ಇತ್ತೀಚಿನ ಆಸ್ತಿ ಘೋಷಣೆಯ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ 50,000 ಕ್ಕಿಂತ ಕಡಿಮೆ ಹಣವನ್ನು ಹೊಂದಿದ್ದಾರೆ.

ಇದರ ಪ್ರಕಾರ, ಪ್ರಧಾನಿ ಮೋದಿ ಅವರು 48,944 ರೂಪಾಯಿ ನಗದು ಹಣವನ್ನು ಹೊಂದಿದ್ದು, ಮಾರ್ಚ್ 31, 2018 ರ ವೇಳೆಗೆ ಗಾಂಧಿನಗರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 11,29,690 ರೂ. ಠೇವಣಿ ಹೊಂದಿದ್ದು, ಮತ್ತೊಂದು ಎಸ್ಬಿಐ ಖಾತೆಯಲ್ಲಿ 1,07,96,288 ರೂ. ಮೊತ್ತದ ಠೇವಣಿ ಹೊಂದಿದ್ದಾರೆ. ಅಲ್ಲದೆ ಮೋದಿಯವರ ಬಳಿ 1,38,060 ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ.

ಗಾಂಧಿನಗರದಲ್ಲಿನ ವಸತಿ ಕಟ್ಟಡವೊಂದರಲ್ಲಿ ಮೋದಿ ನಾಲ್ಕನೇ ಒಂದರಷ್ಟು ಪಾಲು ಹೊಂದಿದ್ದು, ಇದು ಅವರ ಬಳಿ ಇರುವ ಏಕೈಕ ಸ್ಥಿರಾಸ್ತಿಯಾಗಿದೆ. ಅಕ್ಟೋಬರ್ 2002 ರಲ್ಲಿ ಮೋದಿ ಇದನ್ನು 1,30,488 ರೂಪಾಯಿಗಳಿಗೆ ಖರೀದಿಸಿದ್ದರು. ಪ್ರಸ್ತುತ ಇದರ ಮೌಲ್ಯ ಒಂದು ಕೋಟಿ ರೂ. ಎನ್ನಲಾಗಿದೆ.

ಹೂಡಿಕೆಗಳಿಗೆ ಸಂಬಂಧಿಸಿದಂತೆ, ಪ್ರಧಾನಿ ಮೋದಿ ರೂ. 20,000 ಮೌಲ್ಯದ ಎಲ್ & ಟಿ ಇನ್ಫ್ರಾಸ್ಟ್ರಕ್ಚರ್ ಬಾಂಡ್, ರೂ. 5,18,235 ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಮತ್ತು 1,59,281 ರೂ. ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಹೊಂದಿದ್ದಾರೆ.
 

Trending News