ರಜನಿಕಾಂತ್ ಪಕ್ಷದ ಚಿಹ್ನೆಯಲ್ಲಿ ಬದಲಾವಣೆ

ನಟನೆಯಿಂದ ರಾಜಕೀಯ ಪ್ರವೇಶ ಮಾಡಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪಕ್ಷದ ಚಿಹ್ನೆಯಲ್ಲಿ ಬದಲಾವಣೆ ಮಾಡಿದ್ದಾರೆ. 

Updated: Jan 3, 2018 , 03:14 PM IST
ರಜನಿಕಾಂತ್ ಪಕ್ಷದ ಚಿಹ್ನೆಯಲ್ಲಿ ಬದಲಾವಣೆ

ಚೆನ್ನೈ : ನಟನೆಯಿಂದ ರಾಜಕೀಯ ಪ್ರವೇಶ ಮಾಡಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪಕ್ಷದ ಚಿಹ್ನೆಯಲ್ಲಿ ಬದಲಾವಣೆ ಮಾಡಿದ್ದಾರೆ. 

ಬಾಬಾ ಮುದ್ರೆಯ ಕೆಳಗಿದ್ದ ಕಮಲದ ಚಿತ್ರವನ್ನು ಬದಲಿಸಲು ನಿರ್ಧರಿಸಲಾಗಿದ್ದು, ಚಿಹ್ನೆಯ ಹಿಂಬದಿ ಬಣ್ಣದಲ್ಲೂ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಪ್ಪು ಬಣ್ಣದ ಬದಲು ನೀಲಿ ಬಣ್ಣವನ್ನು ಬಳಸಲು ನಿರ್ಧರಿಸಲಾಗಿದೆ. 

ಇತ್ತೀಚಿಗೆ ರಜನಿಕಾಂತ್ ಪಕ್ಷದ ಚಿಹ್ನೆಯಲ್ಲಿ ಬಾಬಾ ಮುದ್ರೆಯ ಕೆಳಗೆ ಕಮಲದ ಗುರುತು ಇದ್ದುದರಿಂದ ಎಲ್ಲರೂ ರಜನಿಕಾಂತ್ ಅವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.