ಆಶ್ರಯ ಮನೆ ಮೇಲಿರುವ ಪಿಎಂ ಮೋದಿ ಮತ್ತು ಸಿಎಂ ಫೋಟೋ ತೆರವುಗೊಳಿಸಿ- ಮಧ್ಯಪ್ರದೇಶ ಹೈಕೋರ್ಟ್ ತೀರ್ಪು

ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ  ಕಟ್ಟಿರುವ ಆಶ್ರಯ ಮನೆಗಳ ಮೇಲಿರುವ ಪ್ರಧಾನಿ ಮೋದಿ ಮತ್ತು ಶಿವರಾಜ್ ಸಿಂಗ್ ಚೌಹಾನ್ ಅವರ ಫೋಟೋಗಳನ್ನು ತೆರವುಗೊಳಿಸಿ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

Last Updated : Sep 20, 2018, 05:38 PM IST
ಆಶ್ರಯ ಮನೆ ಮೇಲಿರುವ ಪಿಎಂ ಮೋದಿ ಮತ್ತು ಸಿಎಂ ಫೋಟೋ ತೆರವುಗೊಳಿಸಿ- ಮಧ್ಯಪ್ರದೇಶ ಹೈಕೋರ್ಟ್ ತೀರ್ಪು title=

ಗ್ವಾಲಿಯರ್: ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ  ಕಟ್ಟಿರುವ ಆಶ್ರಯ ಮನೆಗಳ ಮೇಲಿರುವ ಪ್ರಧಾನಿ ಮೋದಿ ಮತ್ತು ಶಿವರಾಜ್ ಸಿಂಗ್ ಚೌಹಾನ್ ಅವರ ಫೋಟೋಗಳನ್ನು ತೆರವುಗೊಳಿಸಿ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಧ್ಯಪ್ರದೇಶದಲ್ಲಿ PMAY ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಮನೆಗಳಲ್ಲಿನ ಯಾವುದೇ ಹಂಚುಗಳು ಮೇಲೆ ಯಾವುದೇ ರಾಜಕೀಯ ನಾಯಕರ ಫೋಟೋಗಳು ಇರಬಾರದು ಎಂದು ಗ್ವಾಲಿಯರ್ ಹೈಕೋರ್ಟ್ ಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ. ಮೂರು ತಿಂಗಳೊಳಗೆ ಈಗಾಗಲೇ ಅಳವಡಿಸಲಾದ ಅಂಚುಗಳನ್ನು ತೆಗೆಯಬೇಕೆಂದು ಕೋರ್ಟ್ ಆದೇಶ ನೀಡಿದೆ. ಅಲ್ಲದೆ ನ್ಯಾಯಾಲಯವು ಡಿಸೆಂಬರ್ 20ರೊಳಗೆ ಮಧ್ಯಪ್ರದೇಶ ಸರಕಾರದಿಂದ ಸಂಪೂರ್ಣ ವರದಿಯನ್ನು ಕೇಳಿದೆ.

ಜುಲೈನಲ್ಲಿ ದಾಟಿಯಾ ನಿವಾಸಿ ಸಂಜಯ್ ಪುರೋಹಿತ್ ಅವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠವು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಈಗ ನೋಟಿಸ್ ಜಾರಿ ಮಾಡಿದೆ. ಪಿಐಎಲ್ ಅರ್ಜಿ ಸಲ್ಲಿಸಿದ್ದ ಸಂಜಯ್ ಪುರೋಹಿತ್ ಅವರು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿಯ ಫೋಟೋಗಳನ್ನು ಈ ಆಶ್ರಯ ಮನೆಗಳ ಮೇಲೆ ಏಕೆ ಬಳಸಲಾಗುತ್ತಿದೆ ಎಂದು ಪ್ರಶ್ನಿಸಿದ್ದರು.

ಅರ್ಜಿದಾರರು ವಾದಿಸುವಂತೆ ಈ ಮನೆಗಳನ್ನು ಸಾರ್ವಜನಿಕ ಹಣದಲ್ಲಿ ಕಟ್ಟಲಾಗಿದೆಯೇ ಹೊರತು ಯಾವುದೇ ಚುನಾವಣಾ ಪ್ರಯೋಜನಗಳಿಗಾಗಿಲ್ಲ.ಈಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ಫೋಟೊಗಳನ್ನು ಹೊಂದಿರುವ ಹಂಚುಗಳನ್ನು ತೆರವು ಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಇನ್ನೊಂದೆಡೆಗೆ ರಾಜ್ಯ ಸರಕಾರ ಫೋಟೋಗಳನ್ನು ತೆಗೆಯುವ ಸಲುವಾಗಿ ಆದೇಶವನ್ನು ನೀಡಲಾಗಿದೆ ಎಂದು ತನ್ನ ಉತ್ತರದಲ್ಲಿ ತಿಳಿಸಿದೆ. ಅಲ್ಲದೆ ಈ ಯೋಜನೆಯ ಲೋಗೋ ಮಾತ್ರ ಬಳಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Trending News