ಶಬರಿಮಲೆ ವಿವಾದ: ಸಿಎಂ ನಿವಾಸದೆದುರು BJP-RSS ಕಾರ್ಯಕರ್ತರ ಪ್ರತಿಭಟನೆ

ಪ್ರತಿಭಟನೆ ಬಗ್ಗೆ ಮಾತನಾಡಿದ ಬಿಜೆಪಿ ಯುವ ಮೋರ್ಚಾದ ಪ್ರದೇಶ ಅಧ್ಯಕ್ಷ ಪ್ರಕಾಶ್ ಬಾಬು, ಪೊಲೀಸ್ ದೌರ್ಜನ್ಯದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಹೇಳಿದರು.

Last Updated : Nov 19, 2018, 01:33 PM IST
ಶಬರಿಮಲೆ ವಿವಾದ: ಸಿಎಂ ನಿವಾಸದೆದುರು BJP-RSS ಕಾರ್ಯಕರ್ತರ ಪ್ರತಿಭಟನೆ title=
Pic: PTI

ಶಬರಿಮಲೆ: ಕೇರಳದ ಶಬರಿಮಲೆಯಲ್ಲಿ ಪ್ರತಿಭಟನೆ ಭುಗಿಲೆದ್ದಿರುವ ಬೆನ್ನಲ್ಲೇ ಪ್ರತಿಭಟನೆಯ ಬಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ತಟ್ಟಿದೆ. ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದ ಸುಮಾರು 70 ಮಂದಿ ಭಕ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ  ಭಾನುವಾರ ಮಧ್ಯರಾತ್ರಿಯಿಂದಲೇ BJP-RSS ಕಾರ್ಯಕರ್ತರು ಸಿಎಂ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ 'ದಿ ಕ್ಲಿಫ್ ಹೌಸ್'ಗೆ ಮುತ್ತಿಗೆ ಹಾಕಿದ್ದು, ಹಿಂದೂ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಕೇರಳ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಿಎಂ ನಿವಾಸ ಮಾತ್ರವಲ್ಲದೆ, ರಾಜ್ಯದ ಆರನ್ಮುಲ, ಕೊಚ್ಚಿ, ಕೊಲ್ಲಂ, ಅಲಪುಳ, ರಾಣಿ, ತಡುಪುಳ, ಕಲಾಡಿ, ಮಲ್ಲಪುರಂ ಮತ್ತು ಇಡುಕ್ಕಿಗಳಲ್ಲಿ ಭಾನುವಾರ ರಾತ್ರಿ ಇದೇ ರೀತಿಯ ಪ್ರದರ್ಶನಗಳು ನಡೆದಿವೆ. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಾ ಅಸೋಸಿಯೇಷನ್ (ಆರ್ಎಸ್ಎಸ್) ಸದಸ್ಯರು ತಿರುವನಂತಪುರಂ ಮುಖ್ಯಮಂತ್ರಿಯ ಸರ್ಕಾರಿ ಮನೆ 'ಕ್ಲಿಫ್ ಹೌಸ್' ಬಳಿ ಪ್ರತಿಭಟನೆ ನಡೆಸಿದರು.

ಸನ್ನಿಧಾನಂನ ನಾಡ್ಪಾಂತಲ್ ಪ್ರದೇಶದಲ್ಲಿ ಪ್ರತಿಭಟನೆ ಪ್ರಾರಂಭವಾದ ಬಳಿಕ, ಭಾನುವಾರ ರಾತ್ರಿ ಶಬರಿಮಲೆ ದೇವಸ್ಥಾನದಲ್ಲಿ ಪ್ರತಿಭಟನಕಾರರನ್ನು ಬಂಧಿಸಲಾಯಿತು. ಇಲ್ಲಿ ನೂರಾರು ಯಾತ್ರಿಕರು ಪೊಲೀಸ್ ವಿರುದ್ಧ ಪ್ರತಿಭಟನೆ ಮಾದುತ್ತಿದ್ದರು. ಆದಾಗ್ಯೂ, ಬಂಧನಕ್ಕೊಳಗಾದವರನ್ನು ಪಥಮಿಟ್ಟ ಜಿಲ್ಲೆಯ ಮನಿಯಾರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಮಾಹಿತಿ ದೃಢಪಟ್ಟಿಲ್ಲ. ಸ್ಥಳೀಯ ಪಂಬಾ ಪೊಲೀಸ್ ಠಾಣೆಯ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ.

Trending News