ವಿಶ್ವ ಶೂಟಿಂಗ್ ನಲ್ಲಿ ಭಾರತದ ಪ್ರದರ್ಶನ ಕೊಂಡಾಡಿದ ಸಚಿನ್

    

Updated: Mar 13, 2018 , 08:30 PM IST
ವಿಶ್ವ ಶೂಟಿಂಗ್ ನಲ್ಲಿ ಭಾರತದ ಪ್ರದರ್ಶನ ಕೊಂಡಾಡಿದ ಸಚಿನ್

ನವದೆಹಲಿ: ವಿಶ್ವ ಶೂಟಿಂಗ್ ನಲ್ಲಿ ಭಾರತ ನೀಡಿದ ಪ್ರದರ್ಶನಕ್ಕೆ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ತಂಡವು ಇತ್ತೀಚಿಗೆ ಮೆಕ್ಸಿಕೋದಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಅಮೇರಿಕಾ ಚೀನಾ ದಂತಹ ಧೈತ್ಯ ರಾಷ್ಟ್ರಗಳನ್ನು ಹಿಮ್ಮೆಟ್ಟಿ ಶೂಟಿಂಗ್ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.ಸ್ಪರ್ಧೆಯಲ್ಲಿ ಒಟ್ಟು 9 ಪದಕಗಳನ್ನು ಭಾರತ ತನ್ನ ಕೊರಳಿಗೆರಿಸಿಕೊಂಡಿದೆ. ಅದರಲ್ಲಿ ನಾಲ್ಕು ಚಿನ್ನ,ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಮೊದಲ ಸ್ಥಾನವನ್ನು ಕಾಯದುಕೊಂಡಿದೆ. 

ಭಾರತದ ಈ ಪ್ರದರ್ಶನಕ್ಕೆ  ಸಚಿನ ತೆಂಡೂಲ್ಕರ್ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ಸುರಿಮಳೆ ವ್ಯಕ್ತಪಡಿಸಿದ್ದಾರೆ.