ಬಿಜೆಪಿಯು ಪ್ರಜಾಪ್ರಭುತ್ವವನ್ನು ನಾಶಗೊಳಿಸಿದೆ- ಶಿವಸೇನಾ

    

Updated: May 17, 2018 , 03:33 PM IST
ಬಿಜೆಪಿಯು ಪ್ರಜಾಪ್ರಭುತ್ವವನ್ನು ನಾಶಗೊಳಿಸಿದೆ- ಶಿವಸೇನಾ

ಬೆಂಗಳೂರು: ಕರ್ನಾಟಕದ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನ ನೀಡಿರುವುದಕ್ಕೆ ಕಿಡಿಕಾರಿರುವ ಶಿವಸೇನಾ ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಪಡಿಸಿದೆ ಎಂದರು.  

ಈ ಕುರಿತಾಗಿ ಸುದ್ದಿಗಾರರೊಂದಿದೆ ಮಾತನಾಡಿದ ಶಿವಸೇನಾದ ಸಂಜಯ ರಾವತ್ " ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿರಬಹುದು ಆದರೆ ಅವರು ಬಹುಮತಸಾಭಿತು ಮಾಡುವುದು ಕಷ್ಟಕರ ಎಂದಿದ್ದಾರೆ.ರಾಜ್ಯಪಾಲರು ಹೆಚ್ಚು ಸಂಖ್ಯೆಯಿರುವ ಮೈತ್ರಿಕೂಟವನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕಾಗಿತ್ತು ಎಂದು ತಿಳಿಸಿದರು. ಇಂತಹ ಘಟನೆಗಳು ಸಂಭವಿಸಿದಾಗ  ದೇಶದಲ್ಲಿ ಪ್ರಜಾಪ್ರಭುತ್ವವೆ ಇಲ್ಲ ಎನ್ನುವಂತಿದೆ ಎಂದರು.

ಗುರುವಾರದಂದು  ಕರ್ನಾಟಕದ 23 ನೇ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ ಮತ್ತು ಜೆಡಿ (ಎಸ್) ಪಕ್ಷಗಳು ರಾಜ್ಯಪಾಲರ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿವೆ. ಆದರೆ ಸುಪ್ರಿಂಕೋರ್ಟ್ ಯಡಿಯೂರಪ್ಪನವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಡೆ ನಿಡಲು ನಿರಾಕರಿಸಿತ್ತು.