ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ Xiaomiಯ ಈ ಅಗ್ಗದ ಸ್ಮಾರ್ಟ್ ಫೋನ್

ಚೀನೀ ಮೊಬೈಲ್ ತಯಾರಕ ಸಂಸ್ಥೆ Xiaomi (ಕ್ಸಿಯಾಮಿ) ಇಂದು ಮತ್ತೊಂದು ಅಗ್ಗದ ಫೋನ್ ಬಿಡುಗಡೆ ಮಾಡಲಿದೆ. ಇದು ಕಂಪನಿಯ ಬಜೆಟ್ ಸ್ಮಾರ್ಟ್ಫೋನ್ ಆಗಿರುತ್ತದೆ, ಇಲ್ಲಿಯವರೆಗೆ Xiaomi ನೀಡಿರುವ ಎಲ್ಲಾ ಬಜೆಟ್ ಸ್ಮಾರ್ಟ್ಫೋನ್ಗಳು ಬಹಳ ಮೆಚ್ಚುಗೆ ಪಡೆದಿವೆ.

Updated: Mar 14, 2018 , 11:47 AM IST
ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ Xiaomiಯ ಈ ಅಗ್ಗದ ಸ್ಮಾರ್ಟ್ ಫೋನ್

ನವದೆಹಲಿ: ಚೀನೀ ಮೊಬೈಲ್ ತಯಾರಕ ಸಂಸ್ಥೆ Xiaomi (ಕ್ಸಿಯಾಮಿ) ಇಂದು ಮತ್ತೊಂದು ಅಗ್ಗದ ಫೋನ್ ಬಿಡುಗಡೆ ಮಾಡಲಿದೆ. ಇದು ಕಂಪನಿಯ ಬಜೆಟ್ ಸ್ಮಾರ್ಟ್ಫೋನ್ ಆಗಿರುತ್ತದೆ, ಇಲ್ಲಿಯವರೆಗೆ Xiaomi ನೀಡಿರುವ ಎಲ್ಲಾ ಬಜೆಟ್ ಸ್ಮಾರ್ಟ್ಫೋನ್ಗಳು ಬಹಳ ಮೆಚ್ಚುಗೆ ಪಡೆದಿವೆ. ಕಂಪೆನಿ ನೀಡಿರುವ ಮಾಹಿತಿಯ ಪ್ರಕಾರ, ಮಾರ್ಚ್ 14 ರಂದು Xiaomi ರೆಡ್ಮಿ 5(Redmi 5) ಅನ್ನು ಪ್ರಾರಂಭಿಸಲಾಗುವುದು. ಬಿಡುಗಡೆಯಾದ ನಂತರ, ಈ ಫೋನ್ ಇ-ವಾಣಿಜ್ಯ ವೆಬ್ಸೈಟ್ ಅಮೆಜಾನ್ನಲ್ಲಿ ಲಭ್ಯವಾಗುತ್ತದೆ. ಇದಲ್ಲದೆ, ನೀವು ಅದನ್ನು Mi.com ಮತ್ತು MI ನ ಮಾರುಕಟ್ಟೆಗಳಿಂದ ಖರೀದಿಸಬಹುದು.

Xiaomi ರೆಡ್ಮಿ 5 ಮಾರ್ಚ್ 14ರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ. ಕಂಪನಿಯು ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಕಳೆದ ವರ್ಷ ರೆಡ್ಮಿ 5 ಮತ್ತು ರೆಡ್ಮಿ 5 ಪ್ಲಸ್ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 7.0 ನೋಗಟ್ ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನ್ಯಾನೊ ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿದೆ.

5.7 ಇಂಚಿನ ಎಚ್ಡಿ ಡಿಸ್ಪ್ಲೇ
ಈ ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, Redmi 5 ನಲ್ಲಿ 720x1440 ಪಿಕ್ಸೆಲ್ಗಳ ರೆಸೊಲ್ಯೂಶನ್ನೊಂದಿಗೆ 5.7 ಇಂಚ್ ಎಚ್ಡಿ ಡಿಸ್ಪ್ಲೇ ಇರುತ್ತದೆ. ಅಲ್ಲದೆ ಡಿಸ್ಪ್ಲೇಯಲ್ಲಿ ಕರೋನಿಂಗ್ ಗೋರಿಲ್ಲಾ ಗ್ಲಾಸ್ ಅನ್ನು ಬಳಸಿದೆ  ಎಂದು ಕಂಪನಿ ತಿಳಿಸಿದೆ. ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 450 ಪ್ರೊಸೆಸರ್ ಹೊಂದಿದೆ. ಫೋನ್ 2GB, 3GB ಮತ್ತು 4GB RAM ಆಯ್ಕೆಗಳಲ್ಲಿ ಬರುತ್ತದೆ. ಆಂತರಿಕ ಸಂಗ್ರಹಕ್ಕಾಗಿ ಇದು 16 GB ಮತ್ತು 32 GB ಯ ಆಯ್ಕೆಯನ್ನು ಹೊಂದಿದೆ ಎಂದು ಕಂಪನಿ ವಿವರಿಸಿದೆ.

12 ಮೆಗಾಪಿಕ್ಸೆಲ್ ಕ್ಯಾಮರಾ
ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಬಳಕೆದಾರರು ಆಂತರಿಕ ಮೆಮೊರಿಯನ್ನು ಹೆಚ್ಚಿಸಬಹುದು ಎಂದು ತಿಳಿಸಿರುವ ಕಂಪನಿ, ಕ್ಯಾಮೆರಾ ಬಗ್ಗೆ ಮಾತನಾಡುತ್ತಾ, ರೆಡ್ಮಿ 5 ನಲ್ಲಿ ಎಲ್ಇಡಿ ಫ್ಲ್ಯಾಷ್ ನೊಂದಿಗೆ 12 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 
ಸೆಲ್ಫಿ ಫ್ಲ್ಯಾಷ್ ನೊಂದಿಗೆ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ ಎಂದು ಮಾಹಿತಿ ನೀಡಿದೆ.  ಫೋನ್ 3,300 mAh ಬ್ಯಾಟರಿ ಹೊಂದಿದ್ದು ಫಿಂಗರ್ಪ್ರಿಂಟ್ ಸಂವೇದಕವನ್ನು ಸಹ ಹೊಂದಿರುದೆ ಎಂದು ಕಂಪನಿ ತಿಳಿಸಿದೆ.

ಇದರ ಬೆಲೆ?
ಕಂಪೆನಿಯು ಈ Xiaomi ರೆಡ್ಮಿ 5 ಅನ್ನು 8,000 ರೂ. ಬೆಲೆಗೆ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಲಾಗಿದೆ. ಇದಕ್ಕೆ ಮುಂಚಿತವಾಗಿ, Xiaomi ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆ Mi TV 4A ಅನ್ನು ಕೂಡಾ ಆರಂಭಿಸಿದರು. ಈ ಟಿವಿ 32 ಇಂಚು ಮತ್ತು 43 ಇಂಚಿನ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. 32 ಇಂಚಿನ ಟಿವಿ 13,999 ರೂ. ಮತ್ತು 43 ಇಂಚಿನ ಟಿವಿ 22,999 ರೂ. ಈ ಎರಡೂ ಟಿವಿಗಳನ್ನು ಮಾರ್ಚ್ 13 ರಂದು ಸೆಲ್ ಕಂಪನಿ ಆರಂಭಿಸಿದೆ.

By continuing to use the site, you agree to the use of cookies. You can find out more by clicking this link

Close