ವಾರಣಾಸಿಯಲ್ಲಿ ವರುಣನ ಕೃಪೆಗಾಗಿ ಪ್ಲಾಸ್ಟಿಕ್ ಕಪ್ಪೆಗಳ ಮದುವೆ !

   

Last Updated : Jun 24, 2018, 12:08 PM IST
ವಾರಣಾಸಿಯಲ್ಲಿ ವರುಣನ ಕೃಪೆಗಾಗಿ ಪ್ಲಾಸ್ಟಿಕ್ ಕಪ್ಪೆಗಳ ಮದುವೆ ! title=
Photo courtesy: ANI

 ವಾರಣಾಸಿ: ಮುಂಗಾರು ಮಳೆಗಾಗಿ  ಇಲ್ಲಿ ಪ್ಲಾಸ್ಟಿಕ್  ಕಪ್ಪೆಗಳ ನಡುವೆ ಮದುವೆ ಸಮಾರಂಭ ಏರ್ಪಡಿಸಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಸಂಘಟಕರು ಹೇಳುವಂತೆ ಇಂದ್ರನನ್ನು ಸಂತೋಷ ಪಡಿಸಲು ಇದನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕಯಿಸಿರುವ ಸಂಘಟಕರು " ನಮಗೆ ನಗರಲ್ಲಿ ಮಳೆಯಾಗಬೇಕಾಗಿದ್ದು ಆದ್ದರಿಂದ ಹಳೆಯ ನಂಬಿಕೆಯಾಗಿರುವ ಕಪ್ಪೆಗಳ ನಡುವಿನ ಮದುವೆಯು ಇಂದ್ರದೇವನನ್ನು ಸಂತಸ ಪಡಿಸಲಿದೆ. ಎಲ್ಲ ಕಡೆ ಮಳೆ ಆಗುತ್ತಿದೆ ಆದರೆ ವಾರಣಾಸಿಯಲ್ಲಿ ಮಳೆಯಾಗುತ್ತಿಲ್ಲ ಎಂದು ಅದ್ದರಿಂದ ಇಂದ್ರನ ಕೃಪೆಗಾಗಿ ಈ  ಕಪ್ಪೆಗಳ ಮದುವೆ ಕಾರ್ಯಕರ್ಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಎರಡು ಪ್ಲಾಸ್ಟಿಕ್  ಕಪ್ಪೆಗಳಿಗೆ ಹಾರ ಹಾಕಿ ಪ್ರದರ್ಶನಕ್ಕೆ  ಇಡಲಾಗಿತ್ತು. ಇದೆ ಸಂದರ್ಭದಲ್ಲಿ ಪೂಜಾರಿಗಳು ಮಂತ್ರ ಘೋಷಣೆಗಳನ್ನು ಮೊಳಗಿಸಿದರು. ಉತ್ತರ ಪ್ರದೇಶದಲ್ಲಿನ  ಬಿಸಿಗಾಳಿಯಿಂದಾಗಿ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದು ಇದರಿಂದ ಶಾಲೆಗಳಿಗೆ ಜೂನ್ 30 ರವರೆಗೆ ರಜೆ ಘೋಷಿಸಲಾಗಿದೆ.

 

Trending News