ಮೋದಿ ತರಹದ ಅನಕ್ಷರಸ್ಥ, ಅನಾಗರಿಕ ವ್ಯಕ್ತಿಯಿಂದ ವಿದ್ಯಾರ್ಥಿಗಳು ಕಲಿಯುವುದೇನಿದೆ?-ಸಂಜಯ್ ನಿರುಪಮ್

 ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪ್ರಧಾನಿ ನರೇಂದ್ರ ಮೋದಿಯವರನ್ನು ಅನಕ್ಷರಸ್ಥ ಮತ್ತು ಅನಾಗರಿಕ ಎಂದು ಕರೆದಿದ್ದಾರೆ.

Updated: Sep 12, 2018 , 08:27 PM IST
ಮೋದಿ ತರಹದ ಅನಕ್ಷರಸ್ಥ, ಅನಾಗರಿಕ ವ್ಯಕ್ತಿಯಿಂದ ವಿದ್ಯಾರ್ಥಿಗಳು ಕಲಿಯುವುದೇನಿದೆ?-ಸಂಜಯ್ ನಿರುಪಮ್

ಮುಂಬೈ: ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪ್ರಧಾನಿ ನರೇಂದ್ರ ಮೋದಿಯವರನ್ನು ಅನಕ್ಷರಸ್ಥ ಮತ್ತು ಅನಾಗರಿಕ ಎಂದು ಕರೆದಿದ್ದಾರೆ.

ದೇಶಾದ್ಯಂತ ಪ್ರಧಾನಿ ಮೋದಿ ಕುರಿತಾಗಿ ಶಾಲೆಗಳಲ್ಲಿ ಚಿತ್ರ ಪ್ರದರ್ಶನದ  ಕುರಿತಾಗಿ ಈಗ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ "ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಅನಕ್ಷರಸ್ಥ ಮತ್ತು ಅನಾಗರಿಕ ವ್ಯಕ್ತಿಯಾಗಿರುವ ಮೋದಿ ಅವರಿಂದ ಕಲಿಯುವುದೇನಿದೆ? ಎಂದು ಪ್ರಶ್ನಿಸಿದ್ದಾರೆ.ಇನ್ನು ಮುಂದುವರೆದು "ನಮ್ಮ ಮಕ್ಕಳು ಅಂತಹ ಚಲನಚಿತ್ರಗಳನ್ನು ನೋಡಬಾರದು ಏಕೆಂದರೆ ಅವರಿಗೆ ಪ್ರಧಾನಿ ಮೋದಿಯವರ ಶಿಕ್ಷಣದ ಬಗ್ಗೆ ತಿಳಿದಿಲ್ಲ ಎಂದರು.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ "ಕೆಲವು ಮೋದಿ ಕುರಿತಾದ ಚಲನಚಿತ್ರಗಳನ್ನು ಒತ್ತಾಯಪೂರಕವಾಗಿ ತೋರಿಸಲಾಗುತ್ತಿದೆ ಇದು ನಿಜಕ್ಕೂ ತಪ್ಪು . ನಮ್ಮ ಮಕ್ಕಳನ್ನು ರಾಜಕೀಯದಿಂದ ದೂರವಿಡಬೇಕು. ನಮ್ಮ ಜನರು ಮತ್ತು ಮಕ್ಕಳು ನಮ್ಮ ಪ್ರಧಾನಿ ಇದುವರೆಗೂ ಎಷ್ಟು ಡಿಗ್ರಿಗಳನ್ನು ಹೊಂದಿದ್ದಾರೆ ಎನ್ನುವುದರ ಬಗ್ಗೆ ತಿಳಿಯದಿರುವುದು ನಿಜಕ್ಕೂ ಅಸಹ್ಯದ ಸಂಗತಿ ಎಂದು ತಿಳಿಸಿದರು.