'ಹಿಂದು ರೀತಿ ಕಾಣುತ್ತಿಲ್ಲ' ಎಂದು ವಿಜ್ಞಾನಿ ಸೇರಿ ಕನ್ನಡತಿಗೆ ಗರ್ಬಾ ಗೆ ನೋ ಎಂಟ್ರಿ ಎಂದ ಆಯೋಜಕರು!

ಹಿಂದು ರೀತಿ ಕಾಣುತ್ತಿಲ್ಲ ಎಂದು ಅಮೇರಿಕಾದಲ್ಲಿ ಭಾರತೀಯ ವಿಜ್ನಾನಿಯೋಬ್ಬನಿಗೆ ಮತ್ತು ಆತನ ಭಾರತೀಯ ಸ್ನೇಹಿತರಿಗೆ ಆಯೋಜಕರು ಎಂಟ್ರಿ ನೀಡಲು ನಿರಾಕರಿಸಿದ ಘಟನೆ ಅಟ್ಲಾಂಟದಲ್ಲಿ ನಡೆದಿದೆ.

Last Updated : Oct 15, 2018, 08:35 PM IST
'ಹಿಂದು ರೀತಿ ಕಾಣುತ್ತಿಲ್ಲ' ಎಂದು ವಿಜ್ಞಾನಿ ಸೇರಿ ಕನ್ನಡತಿಗೆ ಗರ್ಬಾ ಗೆ ನೋ ಎಂಟ್ರಿ ಎಂದ ಆಯೋಜಕರು!  title=
Photo:facebook

ನವದೆಹಲಿ: ಹಿಂದು ರೀತಿ ಕಾಣುತ್ತಿಲ್ಲ ಎಂದು ಅಮೇರಿಕಾದಲ್ಲಿ ಭಾರತೀಯ ವಿಜ್ನಾನಿಯೋಬ್ಬನಿಗೆ ಮತ್ತು ಆತನ ಭಾರತೀಯ ಸ್ನೇಹಿತರಿಗೆ ಆಯೋಜಕರು ಎಂಟ್ರಿ ನೀಡಲು ನಿರಾಕರಿಸಿದ ಘಟನೆ ಅಟ್ಲಾಂಟದಲ್ಲಿ ನಡೆದಿದೆ.

ಈಗ ವಿಷಯವನ್ನು ಗುಜರಾತಿನ ವಡೋದರ ಮೂಲದ ವಿಜ್ಞಾನಿಯಾದ ಕರಣ್ ಜೈನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಮಾಡಿರುವ ವೀಡಿಯೋವೊಂದರಲ್ಲಿ ಅಲ್ಲಿನ ಶಕ್ತಿ ಮಂದಿರದ ಅಧಿಕಾರಿಗಳು  ನೀವು ಹಿಂದು ರೀತಿ ಕಾಣುತ್ತಿಲ್ಲ ಮತ್ತು ನಿಮ್ಮ ಐಡಿಯಲ್ಲಿ ಅದು ಹಿಂದು ರೀತಿ ಅನಿಸುತ್ತಿಲ್ಲ  ಎಂದು ಹೇಳಿ ಕಾರ್ಯಕ್ರಮಕ್ಕೆ ಪ್ರವೇಶ ನೀಡದಿರುವ ಕುರಿತಾಗಿ ಅವರು ವಿಸ್ತೃತವಾಗಿ ಬರದುಕೊಂಡಿದ್ದಾರೆ.

ಅಲ್ಲಿನ ಅಧಿಕಾರಿಗಳು ಈ ವಿಜ್ಞಾನಿ ಮತ್ತು ಆತನ ಸ್ನೇಹಿತರಿಗೆ " ನಾವು ನಿಮ್ಮ ಕಾರ್ಯಕ್ರಮಕ್ಕೆ ಬರುವುದಿಲ್ಲ ಆದ್ದರಿಂದ ನಿಮ್ಮನ್ನು ನಮ್ಮ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.ವಿಜ್ಞಾನಿ ಸ್ನೇಹಿತೆಯೊಬ್ಬಳು ತನ್ನ ಕೊನೆಯ ಹೆಸರು ಮುರುಡೇಶ್ವರ, ನಾನು ಕನ್ನಡ-ಮರಾಠಿ" ಎಂದು  ಹೇಳಿದ್ದಕ್ಕೆ "ಕನ್ನಡ ಹಾಗೆಂದರೇನು ? ನೀನು ಇಸ್ಮೈಲಿ ಎಂದು ಅವರು ಉತ್ತರಿಸಿ ಅನುಮತಿಯನ್ನು ನಿರಾಕರಿಸಿದ್ದಾರೆ.

ಕಳೆದ ಆರು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಇಲ್ಲಿ ಭಾಗವಹಿಸಲು ಬರುತ್ತಿರುವುದಾಗಿ ಹೇಳಿದ ಕರಣ್ ಜಾನಿ ಅದೇಗೆ ಕೇವಲ ಸರ್ ನೆಮ್ ಆಧಾರದ ಮೇಲೆ ಅವರು ನೀವು  ನಮಗೆ ಪ್ರವೇಶ ನೀಡುವುದಿಲ್ಲ ಎಂದು  ಅಲ್ಲಿನ ದೇವಸ್ಥಾನದ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದ್ದಾರೆ ಅಧ್ಯಾಗ್ಯೂ ಅವರನ್ನು  ಕಾರ್ಯಕ್ರಮಕ್ಕೆ  ಅನುಮತಿ ನಿರಾಕರಿಸಲಾಗಿದೆ.
 

Trending News