ಆಟವಾಡುತ್ತಾ ಸುಣ್ಣದ ಡಬ್ಬಿ ನುಂಗಿ ಮಗು ಸಾವು

ತಿಕೋಟಾ ನಿವಾಸಿ ವಿಶ್ವನಾಥ ತಾಳಿಕೋಟೆ ಎಂಬುವರ 9 ತಿಂಗಳ ಗಂಡು ಮಗು ಮಲ್ಲು ಮೃತಪಟ್ಟ ದುರ್ದೈವಿ. 

Updated: Sep 11, 2018 , 11:13 AM IST
ಆಟವಾಡುತ್ತಾ ಸುಣ್ಣದ ಡಬ್ಬಿ ನುಂಗಿ ಮಗು ಸಾವು

ವಿಜಯಪುರ: ಮನೆಯಲ್ಲಿ ಆಟವಾಡುತ್ತಿದ್ದ ಮಗುವೊಂದು ಸುಣ್ಣದ ಡಬ್ಬಿ ನುಂಗಿ ಸಾನ್ನಪ್ಪಿದ ಧಾರುಣ ಘಟನೆ ವಿಜಯಪುರದ ತಿಕೋಟಾದಲ್ಲಿ ಸೋಮವಾರ ರಾತ್ರಿ ನಡೆದಿದೆ. 

ತಿಕೋಟಾ ನಿವಾಸಿ ವಿಶ್ವನಾಥ ತಾಳಿಕೋಟೆ ಎಂಬುವರ 9 ತಿಂಗಳ ಗಂಡು ಮಗು ಮಲ್ಲು ಮೃತಪಟ್ಟ ದುರ್ದೈವಿ. ಮನೆಯಲ್ಲಿ ಸೋಮವಾರ ಆಟ ಆಡುತ್ತಿದ್ದ ಮಗು ಆಕಸ್ಮಿಕವಾಗಿ ಸುಣ್ಣದ ಡಬ್ಬಿ ನುಂಗಿದೆ. ನಂತರ ಉಸಿರಾಟದ ತೊಂದರೆ ಮತ್ತು ನೋವಿನಿಂದ ಮಗೂ ಅಳಲಾರಂಭಿಸಿದೆ. ಇದನ್ನು ಕಂಡ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೂಡಲೇ ಪರಿಶೀಲಿಸಿದ ವೈದ್ಯರು ಸುಣ್ಣದ ಡಬ್ಬಿ ಹೊರತೆಗೆದಿದ್ದಾರೆ. ಆದರೆ ಅಷ್ಟರೊಳಗಾಗಲೇ ಸುಣ್ಣ ಮಗುವಿನ ದೇಹ ಸೇರಿದ್ದರಿಂದ ಮಗು ಮೃತಪಟ್ಟಿದೆ ಎನ್ನಲಾಗಿದೆ. 

ಮನೆಯಲ್ಲಿ ಸಣ್ಣಮಕ್ಕಳನ್ನು ಎಷ್ಟೇ ಕಾಳಜಿವಹಿಸಿ ನೋಡಿಕೊಂಡರೂ ಸಾಕಾಗುವುದಿಲ್ಲ. ಹಾಗಾಗಿ ಮಕ್ಕಳು ಆಟವಾಡುತ್ತಿದ್ದಾರೆ, ಅಶ್ಟರಲ್ಲಿ ಮನೆ ಕೆಲಸ ಮುಗಿಸಿಬಿಡೋಣ ಎಂದು ಒಂದೈದು ನಿಮಿಷ ಒಳಗೆ ಹೋದರೂ ಅಷ್ಟರಲ್ಲಾಗಲೇ ಏನಾದರೂ ಅವಘಡ ಸಂಭವಿಸಿರುತ್ತದೆ. ಹಾಗಾಗಿ ಮಕ್ಕಳ ಕೈಗೆ ಸಿಗುವಂತೆ ಯಾವುದೇ ಅಪಾಯಕಾರಿ ವಸ್ತುಗಳಾದ, ಮಕ್ಕಳು ನುಂಗಬಹುದಾದ ಸಣ್ಣ ಪುಟ್ಟ ಸುಣ್ಣದ ಡಬ್ಬ, ವಿಕ್ಸ್ ಡಬ್ಬ, ನಾಣ್ಯಗಳು, ಪೆನ್ನು, ಗೋಲಿ... ಹೀಗೆ ಇತರ ವಸ್ತುಗಳನ್ನು ಇಡಬೇಡಿ.
 

By continuing to use the site, you agree to the use of cookies. You can find out more by clicking this link

Close