ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣ: ರಾಜ್ಯ ಸರ್ಕಾರ, ಅಧೀನ ಸಂಸ್ಥೆಗಳಿಗೆ 'ಸುಪ್ರಿಂ' ನೋಟೀಸ್

    

Last Updated : Feb 12, 2018, 04:18 PM IST
ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣ: ರಾಜ್ಯ ಸರ್ಕಾರ, ಅಧೀನ ಸಂಸ್ಥೆಗಳಿಗೆ 'ಸುಪ್ರಿಂ' ನೋಟೀಸ್ title=

ಬೆಂಗಳೂರು: ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ರಾಜ್ಯ ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳಿಗೆ ಮಾಲಿನ್ಯವನ್ನು ತಡೆಗಟ್ಟುವಲ್ಲಿ ವಿಫಲವಾದ ಕುರಿತು ವಿವರಣೆ ನೀಡಲು  ನೋಟಿಸ್ ಜಾರಿ ಮಾಡಿದೆ.

ಹಸಿರು ನ್ಯಾಯಾಧಿಕರಣ ನೀಡಿದ್ದ ಮಧ್ಯಂತರ ಆದೇಶ ಪರ್ಶ್ನಿಸಿ ಲಿಲ್ಲೇ ರಿಯಾಲಿಟಿ ಖಾಸಗಿ ಸಂಸ್ಥೆ ಸಲೀಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, ಕೆರೆಯ ಮಾಲಿನ್ಯವನ್ನು ತಡೆಗಟ್ಟುವಲ್ಲಿ ವಿಫಲವಾದ ಬಗ್ಗೆ ವಿವರಣೆ ನೀಡಲು ಅದು ನೋಟಿಸ್ ಜಾರಿಗೊಳಿಸಿದೆ. ಲಿಲ್ಲೇ ಸಂಸ್ಥೆ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎ.ಕೆ ಸಿಕ್ರಿ ಮತ್ತು ಅಶೋಕ ಭೂಷಣ್ ಪೀಠವು ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

Trending News