ರೈತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಜಿ.ಪರಮೇಶ್ವರ್

ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾತನಾಡುತ್ತಿರುವ ಬಿಜೆಪಿಗೆ ಈ ವಿಚಾರದಲ್ಲಿ ಯಾವುದೇ ನೈತಿಕ ಹಕ್ಕಿಲ್ಲ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.

Last Updated : Nov 21, 2018, 03:17 PM IST
ರೈತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ಜಿ.ಪರಮೇಶ್ವರ್ title=

ತುಮಕೂರು: ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. 

ನಗರದಲ್ಲಿಂದು ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ರೈತರ ಸಮಸ್ಯೆ ಎಂದು ಕೇಂದ್ರದ ಬಳಿ ತೆರಳಿದಾಗ ಅವರು ಯಾವುದೇ ರೀತಿ ಸ್ಪಂದಿಸಿಲ್ಲ. 

‘ಬಿಜೆಪಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’. ರಾಜ್ಯದ ರೈತರ ಸಮಸ್ಯೆ ಎಂದು ಕೇಂದ್ರದ ಬಳಿ ತೆರಳಿದಾಗ ಅವರು ಯಾವುದೇ ರೀತಿ ಸ್ಪಂದಿಸಿಲ್ಲ. ಆದರೀಗ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾತನಾಡುತ್ತಿರುವ ಬಿಜೆಪಿಗೆ ಈ ವಿಚಾರದಲ್ಲಿ ಯಾವುದೇ ನೈತಿಕ ಹಕ್ಕಿಲ್ಲ. ಬಿಜೆಪಿ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕಿ, ರಾಜಕೀಯಕ್ಕಾಗಿ ರೈತರ ಪರವಾಗಿ ಮಾತನಾಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್​​ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್‌ಆರ್‌ಪಿ ಬೆಲೆ ಆಗಾಗ ವ್ಯತ್ಯಾಸವಾಗುತ್ತಿರುತ್ತದೆ. ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ‌ ಬೆಲೆ ನಿಗದಿಪಡಿಸುತ್ತಾರೆ.‌ ಕೆಲವು ಸಂದರ್ಭ ಎಫ್ಆರ್‌ಪಿ ಬೆಲೆಗಿಂತಾ ಹೆಚ್ಚೂ ಸಹ ಸಿಗಬಹುದು, ಕಡಿಮೆಯೂ ಸಿಗಬಹುದು. ಮತ್ತೊಂದೆಡೆ ಕಾರ್ಖಾನೆಗಳು ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳಂತೆ ನಡೆದುಕೊಳ್ಳುವುದಿಲ್ಲ. ರೈತರಿಗೆ ಸಹಾಯ ಮಾಡಲೆಂದು ಕಾರ್ಖಾನೆಗಳಿಗೆ ಸರ್ಕಾರ ಹಣ ನೀಡಿದೆ. ಕಳೆದ ಬಾರಿ‌ ಸಿದ್ದರಾಮಯ್ಯ ಅವರು 450 ರೂಪಾಯಿ ಬೆಂಬಲ ಬೆಲೆ ನೀಡಿದ್ದಾರೆ. 2017-18 ನಡೆದ ಒಪ್ಪಂದದ ಹಣ ಕೊಟಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ‌ ಎಂದು ಹೇಳಿದರು‌‌.

Trending News