6 ಕೋಟಿ ಜನರ ಆಶೀರ್ವಾದವೇ ನನ್ನ ಆಸ್ತಿ; 6 ನೇ ಶ್ರೀಮಂತ ಸಿಎಂ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ

ಕಳೆದ ಚುನಾವಣೆಯ ಸಂದರ್ಭದಲ್ಲಿ  ಘೋಷಿಸಿದ್ದ ಅವಿಭಕ್ತ ಕುಟುಂಬದ ಒಟ್ಟು ಆಸ್ತಿ ವಿವರ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Divyashree K Divyashree K | Updated: Feb 14, 2018 , 01:40 PM IST
6 ಕೋಟಿ ಜನರ ಆಶೀರ್ವಾದವೇ ನನ್ನ ಆಸ್ತಿ; 6 ನೇ ಶ್ರೀಮಂತ ಸಿಎಂ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ದೇಶದ ಶ್ರೀಮಂತ ಮುಖ್ಯಮತ್ರಿಗಳ ಪಟ್ಟಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 6ನೇ ಸ್ಥಾನ ಪಡೆದಿದ್ದಾರೆ ಎಂದು ತಿಳಿಯುತ್ತಿದ್ದಂತೆ, ವಿರೋಧ ಪಕ್ಷಗಳು ಟೀಕೆಗಳ ಮಳೆಯನ್ನೇ ಸುರಿಸಿದ್ದು, ಇದಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ನಿಜವಾದ ಆಸ್ತಿ ಯಾವುದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 

ಇದನ್ನೂ ಓದಿ : ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕರ್ನಾಟಕ ಸಿಎಂ ಸಿದ್ಧರಾಮಯ್ಯಗೆ 6 ನೇ ಸ್ಥಾನ

"ಖಾಸಗಿ ಸಂಸ್ಥೆಯೊಂದು ನನ್ನ ಆಸ್ತಿ ವಿವರವನ್ನು ನೀಡಿದೆ. ಆದರೆ ಅದು ನನ್ನೊಬ್ಬನ ಆಸ್ತಿಯಲ್ಲ. ಕಳೆದ ಚುನಾವಣೆಯ ಸಂದರ್ಭದಲ್ಲಿ  ಘೋಷಿಸಿದ್ದ ಅವಿಭಕ್ತ ಕುಟುಂಬದ ಒಟ್ಟು ಆಸ್ತಿ ವಿವರ. ನನ್ನ ನಿಜವಾದ ಆಸ್ತಿ ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದ" ಎನ್ನುವ ಮೂಲಕ ತಾವು ಜನರ ಮುಖ್ಯಮಂತ್ರಿ ಎಂದು ಮತ್ತೊಮ್ಮೆ ಹೇಳಿದ್ದಾರೆ 

ರೂ.13 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ನಾನು ದೇಶದ 6ನೇ ಶ್ರೀಮಂತ ಮುಖ್ಯಮಂತ್ರಿ ಎಂದು ಸಮೀಕ್ಷೆಯೊಂದು ಹೇಳಿದೆ. ಅದು ನಮ್ಮ ಅವಿಭಕ್ತ ಕುಟುಂಬದ ಆಸ್ತಿಯ ಲೆಕ್ಕವಾಗಿದೆ. 2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ, ತಮ್ಮಂದಿರ ಆಸ್ತಿಗಳ ವಿವರವನ್ನೂ ಆಯೋಗಕ್ಕೆ ಸಲ್ಲಿಸಿದ್ದೆ. ಆದರೆ, ಅಣ್ಣನ ನಿಧನದ ಬಳಿಕ ನಾನೇ ಮನೆಯ ಯಜಮಾನನಾದೆ. ಈಗ ಕುಟುಂಬದ ಆಸ್ತಿಯನ್ನು ವಿಭಜಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಇದನ್ನೂ ಓದಿ : ಇವರು ಭಾರತದ ಅತಿ ಶ್ರೀಮಂತ, ಬಡ ಮುಖ್ಯಮಂತ್ರಿಗಳು!

ದೇಶದ ರಾಜ್ಯ ಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತುತ ಮುಖ್ಯಮಂತ್ರಿಗಳು ಸಲ್ಲಿಸಿರುವ ಆದಾಯ ಆಸ್ತಿವಿವರಗಳನ್ನು ಪರಾಮರ್ಶಿಸಿ ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್(NEW) ದೇಶದ ಅತಿ ಶ್ರೀಮಂತ, ಅತಿ ಬಡ ಮುಖ್ಯಮಂತ್ರಿಗಳ ಪಟ್ಟಿಯನ್ನು ಮಂಗಳವಾರ ಬಹಿರಂಗಗೊಳಿಸಿತ್ತು. ಅದರಲ್ಲಿ ಅತಿ ಶ್ರೀಮಂತ ಮುಖ್ಯಮಂತ್ರಿಯಾಗಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು, ಅತಿ ಬಡ ಮುಖ್ಯಮಂತ್ರಿಯಾಗಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸ್ಥಾನ ಪಡೆದಿದ್ದರು. 

By continuing to use the site, you agree to the use of cookies. You can find out more by clicking this link

Close