ಕೊಪ್ಪಳ: ಫಸ್ಟ್​ನೈಟ್​ ದಿನವೇ ನವವಧು ಕಿಡ್ನಾಪ್​!

ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿಯಿಂದ ದೂರು ದಾಖಲು.

Updated: Oct 11, 2018 , 12:18 PM IST
ಕೊಪ್ಪಳ: ಫಸ್ಟ್​ನೈಟ್​ ದಿನವೇ ನವವಧು ಕಿಡ್ನಾಪ್​!

ಕೊಪ್ಪಳ: ಫಸ್ಟ್​ನೈಟ್​ ದಿನವೇ ನವವಧುವನ್ನು ಅಪರಿಸಿರುವ  ವಿಲಕ್ಷಣ ಘಟನೆ ಕೊಪ್ಪಳ ಜಿಲ್ಲೆಯ ಗುಡೂರಿನಲ್ಲಿ ನಡೆದಿದೆ. 

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಗುಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿಡ್ನಾಪ್ ಆದ ಯುವತಿ ಹಾಗೂ ಮಲ್ಲನಗೌಡ ಕುಷ್ಟಗಿ ತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸೆ. 24 ರಂದು ವಿವಾಹವಾಗಿದ್ದರು. 

15 ದಿನಗಳ(ಅ.07) ಬಳಿಕ ಯುವತಿಯ ತವರು ಮನೆ ಗುಡೂರಿನಲ್ಲಿ ಮೊದಲ ರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೊದಲ ರಾತ್ರಿಯ ದಿನ ಶೌಚಾಲಯಕ್ಕೆ ಹೋದ  ವಧುವನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಆರು ಜನ ಸೇರಿ ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿಯಿಂದ ದೂರು ದಾಖಲಿಸಿದ್ದಾರೆ.

ಅಪಹರಣಕಾರರ ವಿರುದ್ಧ ಕಾರಟಗಿ ಠಾಣೆಯಲ್ಲಿ ದೂರು ನೀಡಿದ್ದರೂ ಅವರು ವಿಚಾರಣೆ ನಡೆಸುತ್ತಿಲ್ಲ ಎಂದು ಮಲ್ಲನಗೌಡ ಆರೋಪಿಸಿದ್ದಾರೆ.

By continuing to use the site, you agree to the use of cookies. You can find out more by clicking this link

Close