ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಡಾ.ಚಂದ್ರಶೇಖರ ಕಂಬಾರ ಆಯ್ಕೆ

      

webmaster A | Updated: Feb 12, 2018 , 03:06 PM IST
ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಡಾ.ಚಂದ್ರಶೇಖರ ಕಂಬಾರ ಆಯ್ಕೆ

ನವದೆಹಲಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ್ ರವರು ಇಂದು ದೆಹಲಿಯಲ್ಲಿ  ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿಗಾಗಿ ನಡೆದ ಚುನಾವಣೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಒಟ್ಟು 89 ಮತಗಳಲ್ಲಿ 56 ಮತಗಳನ್ನು ಪಡೆಯುವುದರ ಮೂಲಕ ಭಾರಿ ಮತಗಳ ಅಂತರದ ಗೆಲುವನ್ನು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧೆಗಳಾಗಿದ್ದ ಮರಾಠಿ ಲೇಖಕ ಬಾಲಚಂದ್ರ ನೆಮಾಡೆ 29  ಹಾಗೂ ಒರಿಯಾ ಲೇಖಕಿ ಪ್ರತಿಭಾ ರೊಯ್ 4 ನಾಲ್ಕು ಮತಗಳನ್ನು ಪಡೆದಿದ್ದಾರೆ.