ನವೆಂಬರ್ 17 ರಿಂದ 28 ರವರೆಗೆ ಮಕ್ಕಳ ಸಮೀಕ್ಷೆ

6 ರಿಂದ 16 ವರ್ಷ ವಯೋಮಾನದ ಯಾವುದೇ ಮಗು ಶಾಲಾ ಶಿಕ್ಷಣದಿಂದ ವಂಚಿತವಾಗಬಾರದು- ಸಾರ್ವಜನಿಕ ಶಿಕ್ಷಣ ಇಲಾಖೆ

Last Updated : Nov 16, 2018, 09:42 AM IST
ನವೆಂಬರ್ 17 ರಿಂದ 28 ರವರೆಗೆ ಮಕ್ಕಳ ಸಮೀಕ್ಷೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಿಕ್ಷಣ ಮಗುವಿನ ಮೂಲಭೂತ ಹಕ್ಕಾಗಿರುವುದರಿಂದ 6 ರಿಂದ 16 ವರ್ಷ ವಯೋಮಾನದ ಯಾವುದೇ ಮಗು ಶಾಲಾ ಶಿಕ್ಷಣದಿಂದ ವಂಚಿತವಾಗಬಾರದೆಂಬ  ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ಇತರೆ ಭಾಗೀದಾರ ಇಲಾಖೆಗಳು ಮತ್ತು ಸರ್ಕಾರೇತರ ಸ್ವಯಂಸೇವ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ನವೆಂಬರ್ 17 ರಿಂದ 28 ರವರೆಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಂಡಿದೆ.

ಇಂತಹ ಮಕ್ಕಳು ತಮ್ಮ ಗಮನಕ್ಕೆ ಬಂದಲ್ಲಿ ಹತ್ತಿರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಿಗೆ ಅಥವಾ ಈ ಕೆಳಗಿನ ದೂರವಾಣಿ ಕರೆಮಾಡಲು ಸಾರ್ವಜನಿಕರು, ಪೋಷಕರು, ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳಲ್ಲಿ ವಿನಂತಿಸಿದೆ.

  • ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ ದಕ್ಷಿಣ ವಲಯ – 1 ದೂರವಾಣಿ ಸಂಖ್ಯೆ 9480695034 
  • ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ ದಕ್ಷಿಣ ವಲಯ – 2 ದೂರವಾಣಿ ಸಂಖ್ಯೆ 9480695035
  • ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ ದಕ್ಷಿಣ ವಲಯ – 3 ದೂರವಾಣಿ ಸಂಖ್ಯೆ 9480695036 
  • ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ ದಕ್ಷಿಣ ವಲಯ – 4 ದೂರವಾಣಿ ಸಂಖ್ಯೆ 9480695037
  • ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ, ಆನೇಕಲ್ – ದೂರವಾಣಿ ಸಂಖ್ಯೆ 9480695033.
     

Trending News