ಅಂತ್ಯಕ್ರಿಯೆಗೆ ಸಿಎಂ ಬರಲೇಬೇಕು ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ರೈತ

ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಮಂಡ್ಯದ ರೈತ.

Updated: Sep 11, 2018 , 02:45 PM IST
ಅಂತ್ಯಕ್ರಿಯೆಗೆ ಸಿಎಂ ಬರಲೇಬೇಕು ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ರೈತ

ಮಂಡ್ಯ: ಸಾಲ ಬಾಧೆ ತಾಳಲಾರದೆ ರಾಜೇಶ್ ಎಂಬ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ, ಮದ್ದೂರಿನ ಮಾಳಗಾರನಹಲ್ಲಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. 

ಐದು ಎಕರೆ ಜಮೀನು ಹೊಂದಿದ್ದ ರಾಜೇಶ್ ಬ್ಯಾಂಕ್ ಮತ್ತು ಕೈ ಸಾಲ ಸೇರಿ ಸುಮಾರು 5 ಲಕ್ಷದವರೆಗೆ ಸಾಲ ಮಾಡಿದ್ದರು. ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ಶರಣಾಗಿರುವ ರೈತ ರಾಜೇಶ್, ನನ್ನ ಅಂತ್ಯಕ್ರಿಯೆಗೆ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ ನಟ ಅಂಬರೀಶ್‌  ಬರಲೇಬೇಕು, ಅವರ ಸಮ್ಮುಖದಲ್ಲಿ ನನ್ನ ಅಂತ್ಯಕ್ರಿಯೆ ನಡೆಸಬೇಕು ಎಂದು ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.