ನ್ಯಾಯಾಂಗ ನಿಂದನೆ‌ ಪ್ರಕರಣ ವಾಪಸ್ ಪಡೆಯಲು ಗೋವಾ ಚಿಂತನೆ

     

webmaster A | Updated: Feb 7, 2018 , 09:22 PM IST
ನ್ಯಾಯಾಂಗ ನಿಂದನೆ‌  ಪ್ರಕರಣ ವಾಪಸ್ ಪಡೆಯಲು ಗೋವಾ ಚಿಂತನೆ
ಸಾಂದರ್ಭಿಕ ಚಿತ್ರ

ನವದೆಹಲಿ: ಮಹಾದಾಯಿ ಪಾತ್ರದಲ್ಲಿ ಕಾಮಗಾರಿ ನಡೆಸಿದೆ ಎಂದು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯು ನ್ಯಾಯಾಧಿಕರಣದ ಅಡಿಯಲ್ಲಿ ಬರುವುದಿಲ್ಲ ಎಂದು ಕರ್ನಾಟಕದ ಪರ ವಕೀಲ ಅಶೋಕ ದೇಸಾಯಿ ವಾದ ಮಂಡಿಸಿದ್ದರಿಂದಾಗಿ ಅದನ್ನು ಪರಿಶೀಲಿಸುವುದಾಗಿ ಗೊವಾ ಉತ್ತರಿಸಿತ್ತು.

ಈಗ ಕರ್ನಾಟಕದ ಈ ಉತ್ತರಕ್ಕೆ ಗೋವಾ ಬೆಚ್ಚಿಬಿದ್ದಿರುವ ಕಾರಣ ಆ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಾಪಸು ಪಡೆಯಲು ಅದು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ನಾಳೆ ನಡೆಯಲಿರುವ ಮಹದಾಯಿಯ ಅಂತಿಮ ಹಂತದ ವಿಚಾರಣೆಯಲ್ಲಿ ಅರ್ಜಿಯನ್ನು ವಾಪಸು ಪಡೆಯವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ.