ಸಂಪುಟ ವಿಸ್ತರಣೆ ದಿನವೇ ಸರ್ಕಾರ ಪತನ: ಕೆ.ಎಸ್.ಈಶ್ವರಪ್ಪ

ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಅವರಲ್ಲೇ ಬಹಳಷ್ಟು ಮಂದಿ ಸರ್ಕಾರ ಬೀಳಿಸಲು ಕಾಯುತ್ತಿದ್ದಾರೆ. ಹಾಗಾಗಿ ಆಪರೇಶನ್ ಕಮಲದ ಅಗತ್ಯವೇ ಇಲ್ಲ ಎಂದು ಈಶ್ವರಪ್ಪ ಹೇಳಿದರು.  

Last Updated : Nov 30, 2018, 02:39 PM IST
ಸಂಪುಟ ವಿಸ್ತರಣೆ ದಿನವೇ ಸರ್ಕಾರ ಪತನ: ಕೆ.ಎಸ್.ಈಶ್ವರಪ್ಪ title=

ಹುಬ್ಬಳ್ಳಿ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಕ್ಷಣದಲ್ಲೇ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಪರೇಶನ್ ಕಮಲ ಮಾಡಲು ಹೊರಟಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಅವರಲ್ಲೇ ಬಹಳಷ್ಟು ಮಂದಿ ಸರ್ಕಾರ ಬೀಳಿಸಲು ಕಾಯುತ್ತಿದ್ದಾರೆ. ಹಾಗಾಗಿ ಆಪರೇಶನ್ ಕಮಲದ ಅಗತ್ಯವೇ ಇಲ್ಲ ಎಂದು ಈಶ್ವರಪ್ಪ ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ಮಂತ್ರಿ ಪದವಿಗೆ ಆಸೆಪಟ್ಟು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ನಿಜಕ್ಕೂ ಸಿದ್ದರಾಮಯ್ಯನವರಿಗೆ ಮಾನ, ಮರ್ಯಾದೆ ಅಂತಿದ್ದರೆ ಖಂತಿತಾ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುತ್ತಿರಲಿಲ್ಲ. ಕೇವಲ ಅಧಿಕಾರಕ್ಕೋಸ್ಕರ ಪಕ್ಷದ ಎಲ್ಲಾ ಸಿದ್ಧಾಂತಗಳನ್ನು ಮರೆತು ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ನಿಜಕ್ಕೂ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ ಎಂಬುದು ತಿಳಿಯುತ್ತಿಲ್ಲ. ಹಾಗೆ ನೋಡಿದರೆ ಇದು ದೇವೇಗೌಡ-ರೇವಣ್ಣ ಸರ್ಕಾರ ಎಂದು ಈಶ್ವರಪ್ಪ ವ್ಯಂಗ್ಯ ಮಾಡಿದರು.

Trending News