ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ, ಜೆಡಿಎಸ್ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ - ಹೆಚ್.ಡಿ.ಕುಮಾರಸ್ವಾಮಿ

   

Updated: Jan 3, 2018 , 08:20 PM IST
ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ, ಜೆಡಿಎಸ್ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ - ಹೆಚ್.ಡಿ.ಕುಮಾರಸ್ವಾಮಿ
Photo Courtesy: twitter

ಬೆಂಗಳೂರು: ಮಾಧ್ಯಮಗಳು ಏನೇ ಸಮೀಕ್ಷೆ ಮಾಡಿ ಹೇಳಿದರು 2018 ರ ವಿಧಾನ ಸಭೆಯಲ್ಲಿ ಜೆಡಿಎಸ್ ಪಕ್ಷವು 113 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ  ಕುಮಾರಸ್ವಾಮಿ ಆಶಯ ವ್ಯಕ್ತಪಡಿಸಿದ್ದಾರೆ. ನಗರದ ಸೆಂಟ್ರಲ್ ಕಾಲೇಜಿನಲ್ಲಿ ಹಿರಿಯನಾಗರಿಕರೊಂದಿಗಿನ ಮಾತುಕತೆಯಲ್ಲಿ  ಈ ಅಭಿಪ್ರಾಯಪಟ್ಟರು.

ಇತ್ತಿಚೇಗೆ ಮಾಧ್ಯಮಗಳು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ 40ರಿಂದ 50ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಹೇಳುತ್ತಿದ್ದಾರೆ. ಆದರೆ ಇದನ್ನು ನಾನು ನಂಬುವುದಿಲ್ಲ ಜೆಡಿಎಸ್ ಪಕ್ಷವು 113 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಸ್ವತಂತ್ರವಾಗಿ ಸರ್ಕಾರವನ್ನು ರಚಿಸುತ್ತದೆ ಎಂದರು.

ರಾಜ್ಯದ ಮುಖ್ಯಮಂತ್ರಿಯಾದರೆ  ವಿಧಾನಸೌಧದ ಬಳಿ ಇರುವ ಕಬ್ಬಿಣದ ಸರಳನ್ನು ಕಿತ್ತು ಹಾಕಿ ದಿನದ ಯಾವುದೇ ಅವಧಿಯಲ್ಲಿ ರಾಜ್ಯದ ಜನತೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಅವಕಾಶ ನೀಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.