ಚುನಾವಣಾ ನಂತರದ ಮೈತ್ರಿ ಬೇಕೆಂದರೆ ದೇವೇಗೌಡರನ್ನು ಟೀಕಿಸುವುದು ಬಿಡಿ- ರಾಹುಲ್ ಗೆ ಜೆಡಿಎಸ್ ಎಚ್ಚರಿಕೆ

    

Updated: Apr 16, 2018 , 07:25 PM IST
ಚುನಾವಣಾ ನಂತರದ ಮೈತ್ರಿ ಬೇಕೆಂದರೆ ದೇವೇಗೌಡರನ್ನು ಟೀಕಿಸುವುದು ಬಿಡಿ-  ರಾಹುಲ್ ಗೆ ಜೆಡಿಎಸ್ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ನಂತರ ಯಾವುದೇ ಪಕ್ಷವು ಬಹುಮತ ಸಿಗದೇ ಇದ್ದ ಪಕ್ಷದಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷದ ಜೊತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆಯನ್ನು ಜೆಡಿಎಸ್ ನ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ಅಲಿ ಈ ಸುಳಿವನ್ನು ನೀಡಿದ್ದಾರೆ.

ಡ್ಯಾನಿಷ್ ಅಲಿ ಹೇಳುವಂತೆ" ದೇವೇಗೌಡರಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಆಸಕ್ತಿ ಇಲ್ಲ,ಆದರೆ ಅವರು ಕಾಂಗ್ರೆಸ್ ನ ಮಾತಿನ ವೈಖರಿಗೆ ಬೇಸರಗೊಂಡಿದ್ದಾರೆ, ಅದರಲ್ಲೂ ರಾಹುಲ್ ಗಾಂಧಿಯವರು ವಯಕ್ತಿಕವಾಗಿ ಟೀಕೆ ಮಾಡುತ್ತಿರುವುದು ಸರಿ ಕಾಣುತ್ತಿಲ್ಲ" ಎಂದು ತಿಳಿಸಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ಡ್ಯಾನಿಶ್ ಅಲಿ "ರಾಹುಲ್ ಗಾಂಧಿಯವರು ಕಾಂಗ್ರೆಸ್ ನ ಅಧ್ಯಕ್ಷರು,ಅವರಿಗೆ ವಿರೋಧ ಪಕ್ಷಗಳನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ,ಆದ್ದರಿಂದ ಅವರು ಸ್ಥಳೀಯ ನಾಯಕರ ಮಾತಿಗೆ ಗಮನ ನೀಡಬಾರದು,ಏಕಂದರೆ ಅವರೆಲ್ಲರಿಗೂ ತಮ್ಮದೇ ಆದ ವೈಯಕ್ತಿಕ ಆಸಕ್ತಿಗಳನ್ನು ಹೊಂದಿದ್ದಾರೆ ಎಂದರು. 

ನಾವು ವಿರೋಧ ಪಕ್ಷದ ಐಕ್ಯತೆಯಲ್ಲಿ ನಾವು ಬಾಗಿಯಾಗಿದ್ದೇವೆ,ಆದ್ದರಿಂದ ನಾನು ಜೆಡಿಎಸ್ ನ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹೇಳುವುದಿಷ್ಟೇ ಕಾಂಗ್ರೆಸ್ ನ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಥಳೀಯ ಕಾಂಗ್ರೆಸ್ ನಾಯಕರ ಮಾತಿಗೆ ಕಿವಿಗೊಡದೆ  ಧಕ್ಕೆ ಉಂಟು ಮಾಡಿಕೊಳ್ಳಬಾರದು ಎಂದು ಡ್ಯಾನಿಶ್ ಅಲಿ ತಿಳಿಸಿದರು,

By continuing to use the site, you agree to the use of cookies. You can find out more by clicking this link

Close