ಕೈಲಾಶ್ ಬಾರ್ ದುರಂತ ಹಿನ್ನೆಲೆ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು

ಕರ್ತವ್ಯ ಲೋಪ ಹಿನ್ನಲೆಯಲ್ಲಿ ಕಲಾಸಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಪ್ರಕಾಶ್ ಅಮಾನತು.

Updated: Jan 11, 2018 , 09:28 AM IST
ಕೈಲಾಶ್ ಬಾರ್ ದುರಂತ ಹಿನ್ನೆಲೆ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು
Pic: ANI

ಬೆಂಗಳೂರು: ಜ.8, ಸೋಮವಾರ ಮುಂಜಾನೆ ನಡೆದ ಕೈಲಾಶ್ ಬಾರ್ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಪ್ರಕಾಶ್ ಅವರನ್ನು ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸಹಕಾರಿ ಕಾಯ್ದೆಯಲ್ಲಿನ ನಿಯಮಾವಳಿಗಳನ್ನು ಜಾರಿ ಮಾಡದ ಹಿನ್ನೆಲೆ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಪ್ರಕಾಶ್ ಅವರನ್ನು ಅಮಾನತುಗೊಳಿಸಲಾಗಿದೆ. ಮದ್ಯ ಮಾರಾಟದ ವೇಳೆ,  ಮದ್ಯ ಬಾಟಲ್ ಮಾರಾಟ ಹಾಗೂ CL-9 ರಲ್ಲಿನ ಷರತ್ತುಗಳನ್ನು ಜಾರಿಗೊಳಿಸುವಲ್ಲಿ ಇನ್ಸ್‌ಪೆಕ್ಟರ್ ವಿಫಲರಾಗಿದ್ದಾರೆ. ಜ. 8 ರಂದು ಕೈಲಾಶ್ ಬಾರ್'ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐವರು ಸಜೀವ ದಹನರಾಗಿದ್ದರು. 

ಇದನ್ನು ಓದಿ: ಬೆಂಗಳೂರಿನ ಕೈಲಾಶ್ ಬಾರ್ನಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ

ಈ ಬಾರ್ನಲ್ಲಿ ತಡರಾತ್ರಿವರೆಗೂ ಮದ್ಯ ಪೂರೈಕೆ ಮಾಡಲಾಗುತ್ತದೆ ಹಾಗೂ ಬೆಳಗಿನ ಜಾವ ನಾಲ್ಕು ಘಂಟೆಯಿಂದಲೆ ಮದ್ಯ ಕೊಡ್ತಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಬಾರ್'ನ ರೋಲಿಂಗ್ ಶೇಟರ್ ನಲ್ಲಿ ಇದಕ್ಕಾಗಿಯೇ ಒಂದು ಸಣ್ಣ ಹೋಲ್ ಅನ್ನು ಸಹ ಮಾಡಿರುವುದು ಕಂಡು ಬಂದಿದೆ. ಈ ಎಲ್ಲಾ ಕಾರಣಗಳನ್ನು ಆಧಾರವಾಗಿಟ್ಟುಕೊಂಡು ಇನ್ಸ್‌ಪೆಕ್ಟರ್ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅಮಾನತು ಮಾಡಲಾಗಿದೆ ಎಂದು ಪೋಲೀಸ್ ಇಲಾಖೆ ಸ್ಪಷ್ಟತೆಯನ್ನು ನೀಡಿದೆ.