ಆಧಾರ್ ಮಸೂದೆ ಗೆ ಅನುಮೋದನೆ ನೀಡಿದ ಕರ್ನಾಟಕ ಸರ್ಕಾರ

    

PTI | Updated: Jan 3, 2018 , 12:45 PM IST
ಆಧಾರ್ ಮಸೂದೆ ಗೆ ಅನುಮೋದನೆ ನೀಡಿದ ಕರ್ನಾಟಕ ಸರ್ಕಾರ

ಬೆಂಗಳೂರು: ಸರ್ಕಾರದ ಅನುದಾನ ಮತ್ತು ಪ್ರಯೋಜನಗಳನ್ನು ವರ್ಗಾವಣೆ ಮಾಡುವ ಉದ್ದೇಶಕ್ಕಾಗಿ  ಕೇಂದ್ರ ಸರ್ಕಾರದ ಆಧಾರ ಯೋಜನೆಗೆ  ಕರ್ನಾಟಕ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಹಿಂದೆ ಸಂಸತ್ತಿನಿಂದ ಅಂಗೀಕರಿಸಲ್ಪಟ್ಟ ಆಧಾರ್ ಮಸೂದೆ, 2016 ಕ್ಕೆ ಕರ್ನಾಟಕ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ ಬಿ ಜಯಚಂದ್ರ ಇಂದು ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ಮಧ್ಯೆ ಹಣದ ಮಸೂದೆಯಾಗಿ 2016 ರಲ್ಲಿ ಶಾಸನವನ್ನು ಜಾರಿಗೆ ತರಲಾಯಿತು. ಆಧಾರ ಮಸೂದೆಯನ್ನು ಹಣಕಾಸು  ಮಸೂದೆಯಾಗಿ ಮಾರ್ಪಡಿಸಲಾಗಿದೆ ಆದ್ದರಿಂದ ಅದಕ್ಕೆ ರಾಜ್ಯಸಭೆಯ ಅನುಮೋದನೆ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು. 

ಆಧಾರ ಮಸೂದೆಯು ಉತ್ತಮ ಆಡಳಿತ, ಸಮರ್ಥ, ಪಾರದರ್ಶಕ, ಮತ್ತು ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ, ಭಾರತದ ಏಕೀಕೃತ ನಿಧಿಯಿಂದ ಬರುವ ಖರ್ಚು, ಅಂತಹ ವ್ಯಕ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು  ಭಾರತದಲ್ಲಿ ವಾಸಿಸುವ ಪ್ರಜೆಗಳಿಗೆ ನೀಡುತ್ತದೆ. 

ಫೆಬ್ರವರಿ 2 ರಿಂದ 9 ರವರೆಗೆ ಶಾಸನಸಭೆಯ ಜಂಟಿ ಅಧಿವೇಶನವನ್ನು ರಾಜ್ಯ ಸರ್ಕಾರವು ಸಭೆ ಮಾಡಲು ನಿರ್ಧರಿಸಿದೆ ಎಂದು ಜಯಚಂದ್ರ ಹೇಳಿದರು. ಕರ್ನಾಟಕ ಗವರ್ನರ್ ವಾಜುಭಾಯ್ ವಲಾ ಈ ಅಧಿವೇಶನದಲ್ಲಿ ಮಾತನಾಡಲಿದ್ದಾರೆ. ಫೆಬ್ರವರಿ 16 ರಿಂದ 28 ರವರೆಗೆ ರಾಜ್ಯ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರ್ಷದ ವಿಧಾನಸಭೆ ಚುನಾವಣೆಗೆ ಹೋಗುವ ಮುನ್ನ ತನ್ನ ಕೊನೆಯ ಬಜೆಟ್ ಮಂಡಿಸುತ್ತಿದ್ದಾರೆ.

By continuing to use the site, you agree to the use of cookies. You can find out more by clicking this link

Close