ಕರ್ನಾಟಕ ಚುನಾವಣಾ ಫಲಿತಾಂಶಗಳು 2018 LIVE

ಮೈತ್ರಿಗೆ ಮುಂದಾದ ಕಾಂಗ್ರೆಸ್, ಜೆಡಿಎಸ್.  

Last Updated : May 15, 2018, 06:13 PM IST
ಕರ್ನಾಟಕ ಚುನಾವಣಾ ಫಲಿತಾಂಶಗಳು 2018 LIVE
Live Blog

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 
ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ವಿಧಾನಸಭಾ ಕ್ಷೇತ್ರಗಳಿಗೆ ಮೇ 12(ಶನಿವಾರ) ಮತದಾನ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ  ದಾಖಲೆಯ 72.5% ಮತದಾನ ನಡೆದಿದೆ. 222 ವಿಧಾನಸಭಾ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಸ್ಥಾನ ಗಳಿಸಿದೆ. ಇಬ್ಬರು ಪಕ್ಷೇತರ ಅಭ್ಯ್ರಥಿಗಳು ಜಯ ಗಳಿಸಿದ್ದರೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಗೆ ಮುಂದಾಗಿವೆ.

 

15 May, 2018

  • 18:11 PM

    ಸರ್ಕಾರ ರಚಿಸಲು 113 ಮ್ಯಾಜಿಕ್ ನಂಬರ್, ಕಾಂಗ್ರೆಸ್-78, ಜೆಡಿಎಸ್-38 ಮತ್ತು ಇಬ್ಬರು ಪಕ್ಷೇತರರು ಸೇರಿ ನಾವು 118 ಸಂಖ್ಯಾ ಬಲವನ್ನು ಹೊಂದಿದ್ದೇವೆ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವಂತೆ ಸಂಖ್ಯಾಬಲದ ಆಧಾರದ ಮೇಲೆ ನಮಗೆ ಸರ್ಕಾರ ರಚಿಸಲು ಅವಕಾಶ ಸಿಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • 18:09 PM

    ಕಾನೂನು ಬಹಳ ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂಖ್ಯಾ ಬಲದ ಮೇಲೆ ಸರ್ಕಾರ ರಚಿಸಲು ಅವಕಾಶವಿದೆ. ರಾಜ್ಯಪಾಲರು ಚುನಾವಣಾ ಆಯೋಗದಿಂದ ಪಟ್ಟಿ ತರಿಸಿಕೊಂಡ ನಂತರ ಸಂಖ್ಯಾ ಬಲ ಹೊಂದಿರುವ ನಮಗೆ ಸರ್ಕಾರ  ರಚಿಸಲು ಅವಕಾಶ ಮಾಡಿಕೊಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ- ಸಿದ್ದರಾಮಯ್ಯ

  • 18:06 PM

    ಇವತ್ತಿನ ಚುನಾವಣಾ ಫಲಿತಾಂಶದ ನಂತರ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ನಾಯಕರು ಚರ್ಚಿಸಿ, ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ಬೆಂಬಲ ಸೂಚಿಸುವ ಪತ್ರ ನೀಡಿದ್ದು, ನಾವು ಸರ್ಕಾರ ರಚಿಸಲು ರಾಜ್ಯಪಾಲರಿಗೆ ಪತ್ರ ನೀಡಿ ಮನವಿ ಮಾಡಿದ್ದೇವೆ. ರಾಜ್ಯಪಾಲರು ಚುನಾವಣಾ ಆಯೋಗದ ಮಾಹಿತಿ ಬಂದ ನಂತರ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ- ಜಂಟಿ ಸುದ್ದಿಗೋಷ್ಠಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ

  • 18:04 PM

    ನಾವು ಕಾಂಗ್ರೆಸ್ ಬೆಂಬಲವನ್ನು ಸ್ವೀಕರಿಸಿದ್ದು, ಸರ್ಕಾರ ರಚಿಸಲು ಒಪ್ಪಿದ್ದೇವೆ ಎಂದು ಜೆಡಿಎಸ್ ರಾಜಾಧ್ಯಕ್ಷರಾದ ಕುಮಾರಸ್ವಾಮಿ ಅವರು ಸಹ ಹೇಳಿದ್ದಾರೆ - ಸಿದ್ದರಾಮಯ್ಯ

  • 18:03 PM

    ಅಖಿಲ ಭಾರತ ಕಾಂಗ್ರೆಸ್ ಪಕ್ಷ, ಜೆಡಿಎಸ್ ಪಕ್ಷ ಸರ್ಕಾರ ರಚಿಸಲು ಸಂಪೂರ್ಣ ಬೆಂಬಲ ನೀಡಲು ತೀರ್ಮಾನ ಮಾಡಿದೆ. ಈಗ ನಮ್ಮ ತೀರ್ಮಾನವನ್ನು ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸಿದ್ದೇವೆ. ನಮ್ಮ ಪಕ್ಷದ ತೀರ್ಮಾನವನ್ನು ಪತ್ರದ ಮೂಲಕ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರಿಗೆ ತಿಳಿಸಿದ್ದೇವೆ- ರಾಜ್ಯಪಾಲರ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿಕೆ

  • 18:02 PM

    ನಾವು ಜೆಡಿಎಸ್ ಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ.

  • 18:01 PM

    ಜೆಡಿಎಸ್ ಜತೆ ಜಂಟಿಯಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ರಾಜ್ಯಪಾಲರ ಭೇಟಿ ಬಳಿಕ ಡಾ. ಜಿ. ಪರಮೇಶ್ವರ್ ಹೇಳಿಕೆ

  • 17:59 PM

    ಬೆಂಗಳೂರಿನಲ್ಲಿ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಜಂಟಿ ಹೇಳಿಕೆ

  • 17:48 PM

    ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಲು ಸಾಕಷ್ಟು ಸಂಖ್ಯಾ ಬಲ ಹೊಂದಿವೆ. ಸಂಖ್ಯಾಬಲವಿಲ್ಲದೆ ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಿಲ್ಲ- ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ

  • 17:47 PM

    ರಾಜಭವನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು

  • 17:45 PM

    ರಾಜಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ಕುಮಾರಸ್ವಾಮಿ, ಗುಲಾಂ ನಬಿ ಆಜಾದ್ ಮತ್ತು ಸಿದ್ದರಾಮಯ್ಯ

  • 17:44 PM

    ಎರಡೂ ಪಕ್ಷದ ನಾಯಕರಿಂದ ರಾಜ್ಯಪಾಲರಿಗೆ ಮನವಿ ಪತ್ರ

  • 17:43 PM

    ನಮಗೆ ಸರ್ಕಾರ ರಚಿಸಲು ಅನುಮತಿ ಕೊಡಿ ಎಂದು ಮನವಿ ಮಾಡಿದ ಉಭಯ ಪಕ್ಷದ ನಾಯಕರು

  • 17:37 PM

    ಸಮ್ಮಿಶ್ರ ಸರ್ಕಾರಕ್ಕೆ ಉಭಯ ಪಕ್ಷಗಳ ಸಮ್ಮತಿ ಇದೆ, ರಾಜ್ಯಪಾಲರ ಬಳಿ ಹಕ್ಕುಪತ್ರ ಮಂಡಿಸಿದ ಎರಡೂ ಪಕ್ಷಗಳ ನಾಯಕರು

  • 17:32 PM

    ರಾಜ್ಯದಲ್ಲಿ ಮತ್ತೆ ಆರಂಭವಾಯ್ತು ರೆಸಾರ್ಟ್ ರಾಜಕಾರಣ. ಪಂಜಾಬ್, ಆಂಧ್ರಕ್ಕೆ ಶಾಸಕರನ್ನು ಕರೆದೊಯ್ಯಲು ಪ್ಲಾನ್

  • 17:31 PM

    ರಾಜಭವನಕ್ಕೆ ಕಾಂಗ್ರೆಸ್ ನಾಯಕರು ಭೇಟಿ

  • 17:27 PM

    ನಾವು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ನಮಗೆ ಸರ್ಕಾರ ರಚಿಸಲು ನಮಗೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದ್ದೇವೆ- ಬಿ.ಎಸ್. ಯಡಿಯೂರಪ್ಪ

  • 17:25 PM

    ರಾಜಭವನದಿಂದ ಹೊರಬಂದ ಬಿ.ಎಸ್.ಯಡಿಯೂರಪ್ಪ, ಅನಂತ್ ಕುಮಾರ್, ಬಿ. ಶ್ರೀರಾಮುಲು

    ಸರ್ಕಾರ ರಚನೆಗೆ ಒಂದು ವಾರ ಕಾಲಾವಕಾಶ ಕೇಳಿದ ಬಿಜೆಪಿ

  • 17:21 PM

    ರಾಜಭವನಕ್ಕೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ

  • 17:11 PM

    100% ನಾವು ಸರ್ಕಾರ ರಚಿಸುತ್ತೇವೆ- ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ

     

  • 17:08 PM

    ಎಚ್.ಡಿ. ದೇವೇಗೌಡರ ಜತೆ ಸಮಾಲೋಚನೆಗಾಗಿ ಗೌಡರ ಪದ್ಮನಾಭ ನಗರ ನಿವಾಸಕ್ಕೆ ಆಗಮಿಸಿದ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್

  • 17:07 PM

    ಮೇ 18ಕ್ಕೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಸಾಧ್ಯತೆ

  • 17:06 PM

    ರಾಜಭವನ ತಲುಪಿದ ಬಿ.ಎಸ್. ಯಡಿಯೂರಪ್ಪ

  • 17:06 PM

    ಸರ್ಕಾರ ರಚನೆಗೆ ಹಕ್ಕು ಮಂಡಿಸಲಿರುವ ಬಿಎಸ್ವೈ. ಯಡಿಯೂರಪ್ಪಗೆ ಸಾಥ್ ನೀಡಿದ ಅನಂತ್ ಕುಮಾರ್, ಸದಾನಂದ ಗೌಡ

  • 17:00 PM

    ಸರ್ಕಾರ ರಚಸಲು ಹಕ್ಕು ಮಂಡಿಗೆ ರಾಜಭವನದತ್ತ ಹೊರಟ ಎಚ್.ಡಿ.ಕುಮಾರಸ್ವಾಮಿ

  • 16:57 PM

    ಎಚ್.ಡಿ. ದೇವೇಗೌಡರ ನಿವಾಸದಿಂದ ಹೋರಾಟ ಎಚ್.ಡಿ. ಕುಮಾರಸ್ವಾಮಿ

  • 16:57 PM

    ನಾಳೆ ಬೆಳಿಗ್ಗೆ 8 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

  • 16:55 PM

    ನಾವು 5 ಗಂಟೆಗೆ ರಾಜ್ಯಪಾಲರ ಭೇಟಿಗೆ ಅನುಮತಿ ತೆಗೆದುಕೊಂಡಿದ್ದೇವೆ.

  • 16:53 PM

    ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗಾಗಿ ನಮಗೆ ಸರ್ಕಾರ ರಚಿಸುವ ಅವಕಾಶ ನೀಡಬೇಕೆಂದು ಕೋರಿ ಮನವಿ ಸಲ್ಲಿಸಲು ನಾವು ಸಂಜೆ 5 ಗಂಟೆಗೆ ರಾಜ್ಯಪಾಲರ ಭೇಟಿಗೆ ತೆರಳುತ್ತಿದ್ದೇವೆ.

  • 16:45 PM

    ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಹಾಗೂ ದೇವೇಗೌಡರ ಭೇಟಿ

  • 16:45 PM

    ರಾಜಭವನಕ್ಕೆ ತೆರಳಿದ ಬಿ.ಎಸ್. ಯಡಿಯೂರಪ್ಪ ಹಾಗೂ ಅನಂತ್ ಕುಮಾರ್. ಸರ್ಕಾರ ರಚನೆಗೆ ಅವಕಾಶ ಕೋರಲಿರುವ ಬಿಜೆಪಿ ನಾಯಕರು

  • 16:44 PM

    ನಾನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೆದ್ದಿದ್ದೇನೆ- ಮುಳಬಾಗಿಲಿನ ಪಕ್ಷೇತರ ಶಾಸಕ ನಾಗೇಶ್

  • 16:43 PM

    ದೇವೇಗೌಡರನ್ನು ಭೇಟಿ ಮಾಡಲು ಮುಂದಾದ ಸಿದ್ದರಾಮಯ್ಯ

  • 16:40 PM

    ಪಕ್ಷೇತರ ಶಾಸಕರು ನಮಗೆ ಬೆಂಬಲ ಸೂಚಿಸಿದ್ದಾರೆ. ಪಕ್ಷೇತರರ ಶಾಸಕರಾದ ಶ್ರೀ ನಾಗೇಶ್ ಮತ್ತು ಇತರ ಶಾಸಕರು ನಮ್ಮೊಂದಿಗಿದ್ದಾರೆ. ನಾವು ಕರ್ನಾಟಕದಲ್ಲಿ ಜಾತ್ಯಾತೀತ ಸರ್ಕಾರವನ್ನು ಬಯಸುತ್ತೇವೆ- ಡಿ.ಕೆ. ಶಿವಕುಮಾರ್

  • 16:37 PM

    ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾದ ಜೆಡಿಎಸ್. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬೆಂಬಲದ ಪತ್ರ ತಯಾರಿ. ಹಕ್ಕು ಮಂಡಿಸಲು ವಕೀಲರ ಜತೆ ಸೇರಿ ಪತ್ರ ಸಿದ್ದಪಡಿಸಲು ದೇವೇಗೌಡರ ಸೂಚನೆ.

  • 16:36 PM

    ಯಶವಂತಪುರ ವಿಧಾನಸಭಾ ಕ್ಷೇತ್ರದ ಸೋಲಿನ ಬಳಿಕ ನವರಸನಾಯಕ ಜಗ್ಗೇಶ್ ಟ್ವೀಟ್

  • 16:34 PM

    ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಿರುವ ಜೆಡಿಎಸ್ ಕಾಂಗ್ರೆಸ್ ನಾಯಕರು. ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಅಶೋಕ್ ಗೆಹ್ಲೋಟ್, ಗುಲಾಮ್ ನಬಿ ಅಜಾದ್ ಸೇರಿದಂತೆ ಪ್ರಮುಖ ನಾಯಕರು ಭಾಗಿ. 

  • 16:29 PM

    ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ವೇದಿಕೆ ಸಜ್ಜು. 05:30ಕ್ಕೆ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಕಾಂಗ್ರೆಸ್ ನಾಯಕರ ಮಹತ್ವದ ಮೈತ್ರಿ ಸಭೆ.

  • 16:28 PM

    ಸಂಜೆ 05:30 ರಿಂದ 06:00 ಗಂಟೆವರೆಗೆ ರಾಜ್ಯಪಾಲರ ಭೇಟಿಗೆ ಅನುಮತಿ ಕೋರಿರುವ ಎಚ್ಡಿಕೆ

  • 16:27 PM

    ರಾಜ್ಯಪಾಲರ ಭೇಟಿಗೆ ಅನುಮತಿ ಕೋರಿದ ಎಚ್ ಡಿ ಕೆ

  • 16:24 PM

    ಸರ್ಕಾರ ರಚಿಸಲು ನಾವು ಕಾಂಗ್ರೆಸ್ ಬೆಂಬಲವನ್ನು ಸ್ವೀಕರಿಸಿದ್ದೇವೆ - ಎಚ್.ಡಿ. ಕುಮಾರಸ್ವಾಮಿ

     

  • 16:22 PM

    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಿಂದ ರಾಜ್ಯಪಾಲರ ಭೇಟಿ

  • 16:21 PM

    ರಾಜ್ಯಪಾಲರ ಭೇಟಿಗೆ ಸಮಯ ಕೇಳಲು ರಾಜಭವನಕ್ಕೆ ತೆರಳಿದ ಜೆಡಿಎಸ್ ನಿಯೋಗ

  • 16:18 PM

    ಸುದ್ದಿಗೋಷ್ಠಿಯಲ್ಲಿ ಬಿಜೆಪಿಗೆ ನೀಡಿರುವ ಬೆಂಬಲಕ್ಕಾಗಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಎಸ್ ವೈ ಹೇಳಿದರು. ಆದರೆ ಕಾಂಗ್ರೆಸ್ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವುದಕ್ಕೆ ಪ್ರಯತ್ನಿಸುತ್ತಿರುವುದನ್ನು ವಿರೋಧಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

  • 16:17 PM

    ಮತ್ತೊಂದೆಡೆ ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ನಡೆ

  • 16:14 PM

    ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸುದ್ದಿಗೋಷ್ಠಿ

    ಕಾಂಗ್ರೆಸ್ ಜತೆ ಮೈತ್ರಿ ಬಗ್ಗೆ ತಿಲಿಸಲಿರುವ ಎಚ್.ಡಿ. ದೇವೇಗೌಡ

  • 16:12 PM

    ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ ಬೆನ್ನೆಲ್ಲೇ ಸುದ್ದಿಗೋಷ್ಠಿ ನಡೆಸಲಿರುವ ಎಚ್ಡಿಡಿ

  • 16:08 PM

    ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್ ಷರತ್ತುಗಳು

    * ಐದು ವರ್ಷ ಸಿಎಂ ಕುರ್ಚಿಗೆ ಬೇಡಿಕೆ

     

Trending News