ಮತ್ತೆ ತೀವ್ರಗೊಂಡ ಮಹದಾಯಿ ಹೋರಾಟ: ಇಂದು ನರಗುಂದ ಬಂದ್

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ.

Updated: Jan 3, 2018 , 11:09 AM IST
ಮತ್ತೆ ತೀವ್ರಗೊಂಡ ಮಹದಾಯಿ ಹೋರಾಟ: ಇಂದು ನರಗುಂದ ಬಂದ್
ಸಾಂದರ್ಭಿಕ ಚಿತ್ರ

ಗದಗ: ಮಹದಾಯಿ ಹೋರಾಟದ ಕಿಚ್ಚು ಮತ್ತೆ ತೀವ್ರಗೊಂಡಿದ್ದು, ಇಂದು ನರಗುಂದ ಬಂದ್ಗೆ ಕರೆ ನೀಡಲಾಗಿದೆ. ಮಹದಾಯಿ ನೀರು ಬಿಡುಗಡೆಗೆ ಗೋವಾ ಕಾಂಗ್ರೇಸ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಏತನ್ಮಧ್ಯೆ ಮಹದಾಯಿ ಹೋರಾಟಗಾರರು ಮಹದಾಯಿ ನೀರಿಗಾಗಿ ಪಕ್ಷಾತೀತ ಹೋರಾಟ ಮಾಡುವಂತೆ ಮನವಿಮಾಡಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಬಂದ್ ಹಿನ್ನೆಲೆಯಲ್ಲಿ ನರಗುಂದದಲ್ಲಿ ಪೋಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.