ಮಂಗಳೂರು : ಬಿಜೆಪಿ ಕಾರ್ಯಕರ್ತನ ಹತ್ಯೆ, ನಾಲ್ವರ ಬಂಧನ

ಇಂದು ಇಲ್ಲಿನ ಕಾಟಿಪಳ್ಳ ಎಂಬಲ್ಲಿ ಹಾಡುಹಗಲೇ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.   

Updated: Jan 3, 2018 , 06:37 PM IST
ಮಂಗಳೂರು : ಬಿಜೆಪಿ ಕಾರ್ಯಕರ್ತನ ಹತ್ಯೆ, ನಾಲ್ವರ ಬಂಧನ

ಮಂಗಳೂರು : ಇಂದು ಇಲ್ಲಿನ ಕಾಟಿಪಳ್ಳ ಎಂಬಲ್ಲಿ ಹಾಡುಹಗಲೇ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಸ್ಥಳಿಯರು ನೀಡಿದ ಮಾಹಿತಿ ಮತ್ತು ಸಿಸಿಟಿವಿ ಫೂಟೆಜ್ ಆಧಾರದ ಮೇಲೆ ದೀಪಕ್ ಹತ್ಯೆಗೆ ಬಳಸಿದ್ದ ಸ್ವಿಫ್ಟ್ ಕಾರನ್ನು ಹಿಂಬಾಲಿಸಿದ ಸುರತ್ಕಲ್ ಪೊಲೀಸರು ಫೈರಿಂಗ್ ಮಾಡುವ ಮೂಲಕ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಇವರಲ್ಲಿ ಒಬ್ಬ ಆರೋಪಿ ಕಾಲಿಗೆ ಗುಂಡು ತಗುಲಿ ಗಾಯವಾಗಿರುವ ಕುರಿತು ಮಾಹಿತಿ ದೊರೆತಿದೆ. 

ಮತ್ತೊಂದೆಡೆ ಸುರತ್ಕಲ್ನಲ್ಲಿ ಸ್ವಯಂಘೋಷಿತ ಬಂದ್ ಆಚರಣೆಗೆ ಬಂದಿದ್ದು, ಸುರತ್ಕಲ್ ನಿಂದ ಸುರಂಜೆಗೆ ತೆರಳುತ್ತಿದ್ದ ಖಾಸಗಿ ಬಸ್ ಗೆ ಕಿಡಿಗೇಡಿಗಳು ಕಲ್ಲು ಎಸೆದು ಗಾಜುಗಳನ್ನು ಒಡೆದಿದ್ದಾರೆ. ಹೀಗಾಗಿ ಸುರತ್ಕಲ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂದಿದ್ದು, ಬಿಗಿ ಪೋಲಿಸ್ ಪಡೆಯನ್ನು ನಿಯೋಜಿಸಲಾಗಿದೆ.  

ಮಂಗಳೂರು ಹೊರವಲಯದ ಕಾಟಿಪಳ್ಳ ಎಂಬಲ್ಲಿ ಇಂದು ಮಧ್ಯಾಹ್ನ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಬಿಜೆಪಿ ಕಾರ್ಯಕರ್ತ ದೀಪಕ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿತ್ತು. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂದು ತನಿಖೆ ಮುಂದುವರೆಸಿದ್ದಾರೆ. 

By continuing to use the site, you agree to the use of cookies. You can find out more by clicking this link

Close