ಸುಪ್ರೀಂ ನ್ಯಾಯಾಧೀಶರ ಸುದ್ದಿಗೊಷ್ಟಿ ನ್ಯಾಯಾಂಗದ ಘನತೆಯನ್ನು ಹಾಳುಮಾಡುತ್ತದೆ : ನಿ. ನ್ಯಾ.ಸಂತೋಷ್ ಹೆಗಡೆ

ಬೆಂಗಳೂರು: ನ್ಯಾಯಾಂಗದ ಆಂತರಿಕ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಹೇಳಿಕೊಂಡಿರುವುದು ಸರಿಯಲ್ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ. 

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪೀಠದ ನಾಲ್ವರು ನ್ಯಾಯಾಧೀಶರು ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ನ್ಯಾಯಾಂಗಕ್ಕೆ ಸ್ವಾತಂತ್ರ್ಯ ಇಲ್ಲದಿದ್ದರೆ ಪ್ರಜಾಪ್ರಭುತ್ವ ಅಸಾಧ್ಯ ಎಂದಿದ್ದ ಹೇಳಿಕೆಗೆ ಸಂತೋಷ್ ಹೆಗಡೆ ಅಭಿಪ್ರಾಯಿಸಿದ್ದಾರೆ. 

"ಸಮಸ್ಯೆಗಳು ಎಲ್ಲೆಡೆ ಇದೆ. ಆದರೆ, ನ್ಯಾಯಾಂಗದ ಮೇಲೆ ಜನರಿಗೆ ಸಾಕಷ್ಟು ನಂಬಿಕೆ ಇದೆ. ಹಾಗಾಗಿ ನ್ಯಾಯಾಲಯದ ಯಾವುದೇ ನ್ಯಾಯಾಲಯದ ಮಿತಿಯೊಳಗೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ರೀತಿ ಜನರ ಮುಂದೆ ಬರಬಾರದಿತ್ತು. ಎಷ್ಟೇ ನೊಂದಿದ್ದರೂ, ಸಂಸ್ಥೆಯ ಗೌರವವನ್ನು ಉಳಿಸಿಕೊಳ್ಳಬೇಕಿತ್ತು" ಎಂದು ನ್ಯಾ.ಸಂತೋಷ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'70 ವರ್ಷದಲ್ಲಿ ಸುಪ್ರೀಂ ಕೋರ್ಟಿಗೆ ನ್ಯಾಯಾಂಗದ ಬಗ್ಗೆ ಹಾಗೂ ನ್ಯಾಯಾಧೀಶರ ಬಗ್ಗೆಯೂ ಕಾಳಜಿ ಇದೆ. ಈ ರೀತಿ ಅಲ್ಲಿಯ ಸಮಸ್ಯೆಗಳನ್ನು ಬಹಿರಂಗಗೊಳಿಸುವುದು ತಪ್ಪು. ಇದರಿಂದ ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಇದಕ್ಕೆ ಬದಲಾಗಿ ಕಾನೂನು ಮಂತ್ರಿಗಳ ಸಮ್ಮುಖದಲ್ಲಿ ಈ ನ್ಯಾಯಾಧೀಶರು ತಮ್ಮ ಆರೋಪಗಳನ್ನು ಹೇಳಿಕೊಳ್ಳಬಹುದಿತ್ತು" ಎಂದು ಅವರು ಹೇಳಿದ್ದಾರೆ.

Section: 
English Title: 
Press Conference of SC Judges will Damage Judiciary's Image, Says Former SC Judge
News Source: 
Home Title: 

ಸುಪ್ರೀಂ ನ್ಯಾಯಾಧೀಶರ ಸುದ್ದಿಗೊಷ್ಟಿ ನ್ಯಾಯಾಂಗದ ಘನತೆಯನ್ನು ಹಾಳುಮಾಡುತ್ತದೆ : ನಿ. ನ್ಯಾ.ಸಂತೋಷ್ ಹೆಗಡೆ

ಸುಪ್ರೀಂ ನ್ಯಾಯಾಧೀಶರ ಸುದ್ದಿಗೊಷ್ಟಿ ನ್ಯಾಯಾಂಗದ ಘನತೆಯನ್ನು ಹಾಳುಮಾಡುತ್ತದೆ : ನಿ.   ನ್ಯಾ.ಸಂತೋಷ್ ಹೆಗಡೆ
Yes
Is Blog?: 
No
Facebook Instant Article: 
Yes