ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಭಾಗಿಯಾಗಲಿರೊ‌ ಪ್ರಧಾನಿ ಮೋದಿ

1981ರಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಆಗಮಿಸಿದ್ದರು.

Updated: Feb 14, 2018 , 09:43 AM IST
ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಭಾಗಿಯಾಗಲಿರೊ‌ ಪ್ರಧಾನಿ ಮೋದಿ

ಹಾಸನ: ಶ್ರವಣಬೆಳಗೊಳದ ಜಗತ್ಪ್ರಸಿದ್ಧ ಬಾಹುಬಲಿಯ 88 ನೇ ಮಹಾಮಸ್ತಕಾಭಿಷೇಕ ಮಹೋತ್ಸವ ಫೆಬ್ರವರಿ 17 ರಿಂದ ಚಾಲನೆಗೊಳ್ಳಲಿದ್ದು, ಮಹೋತ್ಸವದ ಮೂರನೇ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಫೆಬ್ರುವರಿ 19 ಕ್ಕೆ‌ ಶ್ರವಣಬೆಳಗೊಳಕ್ಕೆ ಆಗಮಿಸಲಿರುವ ನಮೋ ಹೆಲಿಕಾಪ್ಟರ್ ಮೂಲಕ ವಿಂದ್ಯಗಿರಿ ಬೆಟ್ಟದ ಮೇಲೆ ಬಾಹುಬಲಿ ಮೂರ್ತಿ ವೀಕ್ಷಿಸಲಿದ್ದು, ಮಧ್ಯಾಹ್ನ 12-45 ರಿಂದ 1-30 ರವರೆಗೆ ಮಸ್ತಕಾಭಿಷೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದೇ ಸಮಯದಲ್ಲಿ ನೂತನವಾಗಿ ನಿರ್ಮಿಸಿರೋ ಸಾರ್ವಜನಿಕ ಆಸ್ಪತ್ರೆ ಉದ್ಘಾಟಿಸಲಿರುವ ನಮೋ, ಬೆಟ್ಟದಲ್ಲಿ ಕೇಂದ್ರ ಪುರಾತತ್ವ ಇಲಾಖೆ ನಿರ್ಮಿಸಿರುವ 600 ಹೊಸ ಮೆಟ್ಟಿಲುಗಳ ಲೋಕಾರ್ಪಣೆ ಮಾಡಲಿದ್ದಾರೆ. 

ಈ ಹಿಂದೆ 1981ರಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಆಗಮಿಸಿದ್ದರು.