ಸರ್ಕಾರಕ್ಕೆ ಸಂಚಕಾರವಿದ್ದರೂ ಕೂಲಾಗಿ ಕಾದುನೋಡಲು ನಿರ್ಧರಿಸಿದ ಜೆಡಿಎಸ್

ಬಿಜೆಪಿ-ಕಾಂಗ್ರೆಸ್ ನಲ್ಲಿನ ಬೆಳವಣಿಗೆ ಬಗ್ಗೆ ತಲೆಕೆಸಿಕೊಳ್ಳುತ್ತಿಲ್ಲವಂತೆ ಜೆಡಿಎಸ್.  

Last Updated : Sep 18, 2018, 11:37 AM IST
ಸರ್ಕಾರಕ್ಕೆ ಸಂಚಕಾರವಿದ್ದರೂ ಕೂಲಾಗಿ ಕಾದುನೋಡಲು ನಿರ್ಧರಿಸಿದ ಜೆಡಿಎಸ್  title=

ಬೆಂಗಳೂರು: ಜಾರಕಿಹೊಳಿ ಸಹೋದರರ ಬಂಡಾಯ ದೋಸ್ತಿ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಕಾಂಗ್ರೆಸ್ ಶಾಸಕರ ಅಸಮಾಧಾನ, ಬಂಡಾಯದ ಬಗ್ಗೆಯೂ ಚಿಂತಿಸಿದ ಜೆಡಿಎಸ್, ಆಪರೇಶನ್ ಕಮಲ ಕೂಡಾ ಜೋರಾಗಿ ಸದ್ದು ಮಾಡ್ತಿದ್ರೂ ನೋ ಟೆನ್ಶನ್ ಎನ್ನುತ್ತಿದೆ. ಎಲ್ಲದಕ್ಕೂ ಕಾಂಗ್ರೆಸ್ ನಾಯಕರಿದ್ದಾರೆ ಡೊಂಟ್ ವರಿ ಅಂತಾ, ಸರ್ಕಾರ ಉಳಿಸೋ ಜವಾಬ್ದಾರಿ ಕಾಂಗ್ರೆಸ್ ಹೆಗಲಿಗೆ ಹಾಕಿ ಕೂಲಾಗಿದೆ ಜೆಡಿಎಸ್. ನಿನ್ನೆ ನಡೆದ ಸಂಧಾನ ಚರ್ಚೆ ವೇಳೆ ಜೆಡಿಎಸ್ ನಡೆ ಬಗ್ಗೆ ಶಾಸಕರು ಸಿದ್ದರಾಮಯ್ಯ ಅವರ ಬಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಶ್ರೀರಕ್ಷೆಯಿಂದಲೇ ಐದು ವರ್ಷ ಪೂರೈಸುತ್ತೇವೆ ಎಂದು ಜಾರಿಕೊಂಡ ಸಿಎಂ ಹೆಚ್ಡಿಕೆ:
ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಅವರ ರಕ್ಷಣೆ ಇದೆ. ಅವರ ಶ್ರೀರಕ್ಷೆಯಿಂದಲೇ ಸರ್ಕಾರ ಐದು ವರ್ಷ ಪೂರೈಸಲಿದೆ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ವಿನಾಕಾರಣ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಹೇಳುವ ಮೂಲಕ ಸರ್ಕಾರ ಸ್ಥಿರವಾಗಿದೆ ಎನ್ನುತ್ತಾ ಏನೂ ಆಗೇ ಇಲ್ಲವೇನೋ ಎಂಬಂತೆ ಸಿಎಂ ಕುಮಾರಸ್ವಾಮಿ ಜಾರಿಕೊಂಡಿದ್ದಾರೆ.

ಜೆಡಿಎಸ್ ಗೆ 30-35 ಸ್ಥಾನ ಪಕ್ಕಾ:
ಸರ್ಕಾರ ಬಿದ್ದರೂ ನೋ ಪ್ರಾಬ್ಲಂ, ಇದ್ದರೂ ನೋ ಪ್ರಾಬ್ಲಂ. ಈ ಎಲ್ಲ ಬೆಳವಣಿಗೆಯಿಂದ ಜೆಡಿಎಸ್ ಗೆ ಆಗಬೇಕಾದದ್ದು ಏನಿಲ್ಲ ಎಂಬ ಧೋರಣೆ ತಾಳಿರುವ ಜೆಡಿಎಸ್ ಮುಖಂಡರು, ತಮ್ಮ ಕೋಟೆಯನ್ನು ಮತ್ತಷ್ಟು ಭದ್ರ ಪಡಿಸಿಕೊಂಡ ಸಮಾಧಾನ ಸ್ಥಿತಿಯಲ್ಲಿದ್ದಾರೆ. ಯಾವಾಗ ಬೇಕಾದರೂ ಚುನಾವಣೆ ನಡೆಯಲಿ ಜೆಡಿಎಸ್ ಗೆ 30-35 ಸ್ಥಾನ ಸಿಗುವುದು ಪಕ್ಕಾ ಎಂಬ ಅತಿಯಾದ ಆತ್ಮ ವಿಶ್ವಾಸದಿಂದ ಜೆಡಿಎಸ್ ಕೂಲಾಗಿದೆ ಎನ್ನಲಾಗುತ್ತಿದೆ.

Trending News