ಬೇಸಿಗೆ ಮುಗಿಯುವವರೆಗೂ ರಾಜ್ಯದಲ್ಲಿ ಟ್ರೆಕಿಂಗ್ ನಿರ್ಬಂಧ

ತಮಿಳುನಾಡಿನಲ್ಲಿ ಕಾಡ್ಗಿಚ್ಚಿನಿಂದಾಗಿ ಸಂಭವಿಸಿದ ಸಾವು-ನೋವಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೇಸಿಗೆ ಮುಗಿಯುವವರೆಗೂ ಚಾರಣಕ್ಕೆ‌ ಹೋಗುವುದಕ್ಕೆ ನಿರ್ಬಂಧಿಸಲಾಗಿದೆ.

Updated: Mar 13, 2018 , 10:56 AM IST
ಬೇಸಿಗೆ ಮುಗಿಯುವವರೆಗೂ ರಾಜ್ಯದಲ್ಲಿ ಟ್ರೆಕಿಂಗ್ ನಿರ್ಬಂಧ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚಿಗೆ ತಮಿಳುನಾಡಿನಲ್ಲಿ ಕಾಡ್ಗಿಚ್ಚಿನಿಂದಾಗಿ ಸಂಭವಿಸಿದ ಸಾವು-ನೋವಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೇಸಿಗೆ ಮುಗಿಯುವವರೆಗೂ ಟ್ರೆಕಿಂಗ್‌(ಚಾರಣಕ್ಕೆ) ಹೋಗುವುದನ್ನು ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದಲ್ಲಿನ ಅರಣ್ಯ ‌ಪ್ರದೇಶಕ್ಕೆ ಹೋಗುವ ಚಾರಣಿಗರಿಗೆ ನಿರ್ಬಂಧ ಹೇರಿ‌ ಆದೇಶ ಹೊರಡಿಸಿದ ಅರಣ್ಯ ಇಲಾಖೆ, ಬೇಸಿಗೆ ಕಾಲದಲ್ಲಿ ಸಂಭವನೀಯ ಪ್ರದೇಶಗಳಲ್ಲಿ ಬೆಂಕಿ‌ ಬೀಳುವ ಸಾಧ್ಯತೆ ಎಂದು ತಿಳಿಸಿದೆ. 

ಈಗಾಗಲೇ ತಮಿಳುನಾಡಿನಲ್ಲಿ ಉಂಟಾದ ಕಾಡ್ಗಿಚ್ಚಿನಿಂದ‌ ಹಲವು ಸಾವು ಉಂಟಾಗಿವೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ‌ಬೇಸಿಗೆ ಕಾಲ ಪೂರ್ಣಗೊಳ್ಳುವ ವರೆಗೂ ಚಾರಣಿಗರು ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.