ಬೆಂಗಳೂರಿನಲ್ಲಿ ಫೆ.18 ರಂದು ಉದ್ಯೋಗಕ್ಕಾಗಿ ಯುವಜನರ ಆಂದೋಲನ

     

Manjunath Naragund Manjunath Naragund | Updated: Feb 14, 2018 , 03:06 PM IST
ಬೆಂಗಳೂರಿನಲ್ಲಿ ಫೆ.18 ರಂದು ಉದ್ಯೋಗಕ್ಕಾಗಿ ಯುವಜನರ ಆಂದೋಲನ

ಬೆಂಗಳೂರು: ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಯುವಕರನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣೆಗಳನ್ನು ಎದುರಿದುವುದು ಸಾಮಾನ್ಯ ಸಂಗತಿ. ಆದರೆ ಆ ಎಲ್ಲ ಪಕ್ಷಗಳು ತಾವು ಅಧಿಕಾರಕ್ಕೆ ಬಂದ ಕೂಡಲೇ ಯುವಜನರನ್ನು ಕಡೆಗಣಿಸಿ ಕೇವಲ ಸೀಮಿತ ಹಿತಾಸಕ್ತಿಗಳನುಸಾರವಾಗಿ ಕಾರ್ಯ ನಿರ್ವಹಿಸುವುದು ಒಂದು ರೀತಿಯಲ್ಲಿ ರೂಡಿಗತವಾಗಿ ಬೆಳೆದು ಬಂದು ಬಂದಿದೆ.

ಆ ನಿಟ್ಟಿನಲ್ಲಿ ಈ ಬಾರಿ ಯುವಜನರು ತಮ್ಮ ಪರವಾಗಿ ಜನಾಭಿಪ್ರಾಯವನ್ನು ರೂಪಿಸಲು ಸಜ್ಜಾಗಿದ್ದಾರೆ. ಆದ್ದರಿಂದ ಇದಕ್ಕೆ ಪೂರಕವಾಗಿ 'ಉದ್ಯೋಗಕ್ಕಾಗಿ ಯುವಜನರು' ಎನ್ನುವ ಆಂದೋಲನವನ್ನು ಹಮ್ಮಿಕೊಂಡಿದ್ದಾರೆ. ಎಲ್ಲ ಪಕ್ಷಗಳು ಕಳೆದ ತಮ್ಮ ಅಧಿಕಾರವಧಿಯಲ್ಲಿ ಯುವಜನರಿಗೆ ನೀಡಿದ ಉದ್ಯೋಗದ ಘೋಷಣೆಗಳೇನು ಮತ್ತು ಅವುಗಳನ್ನು ಎಷ್ಟರಮಟ್ಟಿಗೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ಕಾರ್ಯಗತಗೊಳಿಸಿವೆ ಎನ್ನುವುದರ ಕುರಿತಾಗಿ ಈ ಆಂದೋಲನದಲ್ಲಿ ಯುವಕರೆಲ್ಲರು ಒಂದಾಗಿ ಚರ್ಚಿಸಿಸಲಿದ್ದಾರೆ.

ಆದ್ದರಿಂದ ಈ ಬಾರಿ ಯುವಜನರ ಉದ್ಯೋಗ ಸೃಷ್ಟಿಗಾಗಿ ಎಲ್ಲ ರಾಜಕೀಯ ಪಕ್ಷಗಳು ರೂಪಿಸುತ್ತಿರುವ ಯೋಜನೆಗಳೇನು ಎನ್ನುವುದರ ಕುರಿತಾಗಿ ಇದೆ ಫೆಬ್ರುವರಿ 18 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಯುವಜನರ ಅಧಿವೇಶನ' ದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಯುವಜನರು ಮುಖಾಮುಖಿಯಾಗಲಿದ್ದಾರೆ.ಅಲ್ಲದೆ ಇದೇ ಸಂದರ್ಭದಲ್ಲಿ ಯುವಜನರ ಕುರಿತಾದ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.