ಚಿತ್ರರಂಗದಲ್ಲಿ 10 ವರ್ಷಗಳನ್ನು ಪೂರೈಸಿದ ಬ್ಯೂಟಿಫುಲ್ ನಟಿ ಭಾವನಾ

   

Mar 9, 2018, 02:54 PM IST
1/8

'ಜಾಕಿ' ಚಿತ್ರದಿಂದ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿಫುಲ್ ನಟಿ ಭಾವನಾ ಚಿತ್ರರಂಗದಲ್ಲಿ 10 ವರ್ಷಗಳನ್ನು ಪೂರೈಸಿದ್ದಾರೆ. 

 

2/8

ಪುನೀತ್ ರಾಜಕುಮಾರ್, ಸುದೀಪ್, ಉಪೇಂದ್ರ, ಶಿವರಾಜ್ ಕುಮಾರ್, ಗಣೇಶ್ ಹೀಗೆ ಪ್ರತಿಭಾವಂತ ನಟರು ಮತ್ತು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. 

3/8

ಅಷ್ಟೇ ಅಲ್ಲ, ಚಿತ್ರ ನಿರ್ಮಾಪಕ ಕನ್ನಡಿಗ ನವೀನ್ ಅವರನ್ನು ವಿವಾಹವಾದ ಮೇಲಂತೂ ಮೂಲತಃ ಮಲೆಯಾಳಿಯಾದರು, ಭಾವನಾ ಬೆಂಗಳೂರಿನ ಸೊಸೆಯಾಗಿ, ಕನ್ನಡತಿ ಆಗಿದ್ದಾರೆ. 

4/8

ಕನ್ನಡ ಚಿತ್ರರಂಗದಲ್ಲಿ ಉತ್ತಮ ಹಾಡುಗಳು, ಪಾತ್ರಗಳು ಸಿಕ್ಕಿವೆ. ಅಷ್ಟೇ ಅಲ್ಲ, ಇಲ್ಲಿ ಅಭಿಮಾನಿಗಳ ಪ್ರೀತಿ ಮತ್ತು ಗೌರವ ಸಿಕ್ಕಿದೆ ಎನ್ನುತ್ತಾರೆ ಭಾವನಾ. 

5/8

ಇತ್ತೀಚಿಗೆ ಶಿವರಾಜ್ ಕುಮಾರ್ ಜೊತೆ ಅಭಿನಯಿಸಿದ 'ಟಗರು' ಚಿತ್ರ ಯಶಸ್ಸನ್ನು ಕಂಡಿದೆ. ಈ ಮೂಲಕ ಸ್ಯಾಂಡಲ್'ವುಡ್ನಲ್ಲಿ ಮತ್ತೊಂದು ಬ್ರೇಕ್ ಸಿಕ್ಕಂತಾಗಿದೆ. 

6/8

ಪ್ರಸ್ತುತ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಭಾವನಾ ಅಭಿನಯಿಸುತ್ತಿದ್ದಾರೆ. ಡ್ರಗ್ ಡೀಲರ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಭಾವನ, ವಿಶೇಷ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

7/8

 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರ ಭಾವನಾ ಮದುವೆಯಾದ ನಂತರ ಅಭಿನಯಿಸುತ್ತಿರುವ ಮೊದಲ ಸಿನಿಮಾ.

8/8

ಕಳೆದ 10 ವರ್ಷಗಳಲ್ಲಿ ಒಟ್ಟು 77 ಚಿತ್ರಗಳಲ್ಲಿ ಅಭಿನಯಿಸಿರುವ ಭಾವನಾ ಇಂದಿಗೂ ತಮ್ಮನ್ನು ಹೊಸ ನಟಿ ಎಂದೇ ಭಾವಿಸುತ್ತಾರೆ. ಇಷ್ಟು ವರ್ಷದ ಚಿತ್ರ ಪಯಣ ಖುಷಿ ಕೊಟ್ಟಿದೆ ಎನ್ನುತ್ತಾರೆ ಭಾವನಾ.