ಕಂಗನಾ ಮತ್ತು ರಾಜ್ ಕುಮಾರ್ ಅಭಿನಯದ ಬಾಲಿವುಡ್'ನ 'ಮೆಂಟಲ್ ಹೈ ಕ್ಯಾ' ಚಿತ್ರದ ಪೋಸ್ಟರ್ ನೋಡಿದ್ರೆ ನೀವೂ ಹುಚ್ಚರಾಗ್ತಿರಿ!

   

Mar 10, 2018, 06:20 PM IST
1/8

ಬೋಲ್ಡ್ ಬ್ಯೂಟಿ ಕಂಗನಾ ರಾವತ್ ಸಿಕ್ಕಾಪಟ್ಟೆ ಹಾಟ್ ಅನ್ನೋದು ಅಭಿಮಾನಿಗಳಿಗೆ ಗೊತ್ತಿರೋ ವಿಚಾರವೇ. ಈ ಬಾರಿ ಮತ್ತು ಕಂಗನಾ, ರಾಜ್ ಕುಮಾರ್ ರಾವ್ ಜೋಡಿಯಾಗಿ ಪ್ರಕಾಶ್ ಕೋವೆಲಮುಡಿ ಅವರ 'ಮೆಂಟಲ್ ಹೈ ಕ್ಯಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

2/8

ಈ ಹಿಂದೆ 2014ರಲ್ಲಿ ವಿಕಾಸ್ ಬಾಹ್ಲ್ ಅವರ ಬ್ಲಾಕ್ಬಸ್ಟರ್ ಸಿನಿಮಾ 'ಕ್ವೀನ್'ನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದರು. 

3/8

ಇಬ್ಬರೂ ಪ್ರತಿಭಾವಂತ ನಟರಾಗಿದ್ದು, ಇದೀಗ ಒಂದು ಮೆಂಟಲ್ ಜರ್ನಿಗೆ ಸಿದ್ಧವಾಗಿದ್ದಾರೆ. 

4/8

ಚಿತ್ರವನ್ನು ಪ್ರಕಾಶ್ ಕೋವೆಲಮುಡಿಯ ನಿರ್ದೇಶಿಸಿದ್ದಾರೆ. 

5/8

ಚಿತ್ರದ ಪೋಸ್ಟರ್ಗಳನ್ನು ನೋಡುತ್ತಿದ್ದರೆ ಇದೊಂದು ಮಾನಸಿಕ ಥ್ರಿಲ್ಲರ್ ಚಿತ್ರದಂತೆ ಕಾಣುತ್ತದೆ. ಆದರೆ ರಾಜ್ ಕುಮಾರ್ ಅವರ ಪ್ರಕಾರ ಇದೊಂದು ಹಾಸ್ಯ ಚಿತ್ರವಂತೆ.

6/8

ಬಾಲಿವುಡ್ನ ಅತ್ಯುತ್ತಮ ಪ್ರತಿಭೆಗಳಲ್ಲಿ ರಾಜ್ ಕುಮಾರ್ ಕೂಡ ಒಬ್ಬರು. ತಮ್ಮ ಅಮೋಘ ಅಭಿನಯವನ್ನು ಮತ್ತೊಮ್ಮೆ ಈ ಚಿತ್ರದಲ್ಲಿ ಸಾಬೀತುಪಡಿಸಿದ್ದಾರೆ. 

7/8

ಕಂಗನಾ ಅಪ್ರತಿಮ ಪ್ರತಿಭೆ. ಈಗಾಗಲೇ ಆಕೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

8/8

ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಈ ಚಿತ್ರ ಬರಲಿದ್ದು, ಮೆಂಟಲ್ ಹೈ ಕ್ಯಾ ಅಂತ ಜನ ಯಾರನ್ನ ಕೇಳ್ತಾರೆ? ಅದರ ವಿಶಿಷ್ಟತೆ ಏನು ಅನ್ನೋದನ್ನು ಕಾದು ನೋಡಬೇಕಿದೆ.