ಐಪಿಎಲ್ 2018 ಪಂದ್ಯಕ್ಕೆ ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ

  

  • Apr 02, 2018, 20:10 PM IST
1 /5

ಐಪಿಎಲ್ ಪಂದ್ಯವು ಇದೇ ಏಪ್ರಿಲ್ 7 ರಿಂದ ಆರಂಭವಾಗುತ್ತಿದೆ. ಐಪಿಎಲ್ 11ನೇ ಆವೃತ್ತಿಯ ಮೊದಲ ಪಂದ್ಯ ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಹಾಗೆಯೇ ಐಪಿಎಲ್ ಫೈನಲ್ ಪಂದ್ಯ ಕೂಡ ಮೆ 27ರಂದು ಮುಂಬೈನಲ್ಲಿಯೇ ನಡೆಯಲಿದೆ. ಅಲ್ಲದೆ, ಎರಡು ವರ್ಷಗಳ ನಿಷೇಧದ ನಂತರ ಈ ಬಾರಿಯ ಐಪಿಎಲ್ ನಲ್ಲಿ ಮತ್ತೊಮ್ಮೆ ರಾಜಸ್ತಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡುತ್ತಿದೆ. ಇದರೊಂದಿಗೆ ಎಲ್ಲರ ಗಮನ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಮೇಲಿದೆ. 

2 /5

ಐಪಿಎಲ್ 2018ರ ಪಂದ್ಯಾವಳಿಗಾಗಿ ಎಲ್ಲಾ ತಂಡಗಳು ತಮ್ಮ ಆಟಗಾರರೊಂದಿಗೆ ಭರ್ಜರಿ ತಯಾರಿ ಆರಂಭಿಸಿವೆ. ಆಟಗಾರರು ಕೂಡ ಈಗ ಮೈದಾನಕ್ಕೆ ಅಭ್ಯಾಸ ಆರಂಭಿಸಿದ್ದಾರೆ. ಅಂತೆಯೇ ವಿದೇಶಿ ಆಟಗಾರರೂ ಸಹ ಭಾರತಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಸಹ ಮೈದಾನಕ್ಕೆ ಇಳಿದಿದ್ದಾರೆ.

3 /5

ವಿರಾಟ್ ಕೊಹ್ಲಿ ಅವರು 37 ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಜರ್ಸಿಯಲ್ಲಿ, ವಿರಾಟ್ ಕೊಹ್ಲಿ ಸಹ ಮೈದಾನದಲ್ಲಿ ತಾಲೀಮು ಮತ್ತು ಬ್ಯಾಟಿಂಗ್ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.  

4 /5

ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ, ಫೆಬ್ರವರಿ 22 ರಂದು ವಿರಾಟ್ ಕೊನೆಯ ಪಂದ್ಯವನ್ನು ಆಡಿದ್ದರು. ಅದು ದಕ್ಷಿಣ ಆಫ್ರಿಕಾದ ವಿರುದ್ಧದ ಎರಡನೇ ಟಿ20 ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಭಾರತ 6 ವಿಕೆಟ್ಗಳಿಂದ ಜಯ ಸಾಧಿಸಿತ್ತು.

5 /5

ಆದರೆ ಈ ಬಾರಿ ವಿರಾಟ್ ಕೊಹ್ಲಿ ಅವರು ತಮ್ಮ ತಂಡದ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಏಕೆಂದರೆ ಇದುವರೆಗೂ ನಡೆದ ಐಪಿಎಲ್ ಪಂದ್ಯಗಳಲ್ಲಿ ಅವರ ತಂಡ ಯಾವುದೇ ಪ್ರಶಸ್ತಿಯನ್ನು ಗಳಿಸಿಲ್ಲ. ಆದರೆ, ಅವರ ಕ್ರಿಕೆಟ್ ಅಭ್ಯಾಸ ನೋಡಿದರೆ, ಈ ಬಾರಿ ಪ್ರಶಸ್ತಿ ಗೆಲ್ಲಲೇಬೇಕೆಂದು ತಂಡ ನಿರ್ಧರಿಸಿದಂತಿದೆ. ಈ ವರ್ಷದ ಐಪಿಎಲ್'ನಲ್ಲಿ ವಿರಾಟ್ ಅತ್ಯಂತ ದುಬಾರಿ ಆಟಗಾರ ಎನಿಸಿದ್ದಾರೆ. ಬೆಂಗಳೂರು ತಂಡವು 17 ಕೋಟಿ ರೂ. ಗಳನ್ನೂ ನೀಡಿ ವಿರಾಟ್ ಕೊಹ್ಲಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ.                         -ಫೋಟೊ ಕೃಪೆ: @ ಆರ್ಸಿಬಿಟ್ವೀಟ್ಸ್, ಐಎಎನ್ಎಸ್